►ಸೌದಿ ಪ್ರಜೆಗಳ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದವರಿಗೆ ಸಂಕಷ್ಟ!
ರಿಯಾದ್: ಫೆಬ್ರವರಿ 2022 ರ ನಂತರ, ಬೇನಾಮಿ ವ್ಯವಹಾರಗಳನ್ನು ಗುರುತಿಸಲು ತಪಾಸಣೆ ಮತ್ತು ಕಾರ್ಯವಿಧಾನಗಳನ್ನು ಸೌದಿ ಅರೇಬಿಯಾ ಪ್ರಾರಂಭಿಸಲಿದೆ.
ಇನ್ನು ಮುಂದೆ ವಿದೇಶಿಗರು ಸ್ವದೇಶಿ ಪ್ರಜೆಗಳ ಹೆಸರಿನಲ್ಲಿ ವ್ಯಾಪಾರ ಮಾಡುವುದು ಸೌದಿಯಲ್ಲಿ ದೊಡ್ಡ ಅಪರಾಧವಾಗಿದ್ದು, ಬೇನಾಮಿ ಉದ್ಯಮಿಗಳಿಗೆ ಕಡಿವಾಣ ಬೀಳಲಿದೆ.
ಸೌದಿಯಲ್ಲಿ ಕಿರಾಣಿ ಅಂಗಡಿ(ಗ್ರೋಸರಿ) , ಕ್ಷೌರಿಕ ಅಂಗಡಿ ಮತ್ತು ಗ್ಯಾಸ್ ಸ್ಟೇಷನ್ ವಲಯದಲ್ಲಿ ಶೇ.100ರಷ್ಟು ಬೇನಾಮಿ ವ್ಯವಹಾರಗಳು ನಡೆಯುತ್ತಿರುವುದು ಕೌನ್ಸಿಲ್ ಆಫ್ ಸೌದಿ ಚೇಂಬರ್ಸ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.