ತ್ರಿಪುರಾ ಹಿಂಸಾಚಾರ: ಸರ್ಕಾರದಿಂದ ವರದಿ ಕೇಳಿದ ರಾಷ್ಟ್ರೀಯ ಮಾನವಹಕ್ಕು ಆಯೋಗ

Prasthutha|

ಅಗರ್ತಲಾ: ಈಶಾನ್ಯ ರಾಜ್ಯದ್ಯಾಂತ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ನಡೆಸಿದ ಹಿಂಸಾಚಾರದ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), ತ್ರಿಪುರಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ವರದಿ ನೀಡುವಂತೆ ಸೂಚಿಸಿದೆ.

- Advertisement -

ಆರ್.ಟಿ.ಐ ಕಾರ್ಯಕರ್ತ, ಟಿ.ಎಂ.ಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ, ಸಲ್ಲಿಸಿದ ದೂರಿನನ್ವಯ NHRC ಈ ಕ್ರಮ ಕೈಗೊಂಡಿದೆ.

ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹಿಂಸಾಚಾರದ ವರದಿಗಳ ಹೊರತಾಗಿಯೂ ರಾಜ್ಯ ಸರ್ಕಾರ ಮತ್ತು ಆಡಳಿತ ಯಂತ್ರ ಗಲಭೆಕೋರರೊಂದಿಗೆ ಕೈಜೋಡಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

- Advertisement -

ಈ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪ್ರತಿಕ್ರಿಯಿಸುವಂತೆ ನಾಲ್ಕು ವಾರಗಳ ಕಾಲಾವಧಿ ನೀಡಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ಕಳೆದ ತಿಂಗಳು ತ್ರಿಪುರಾದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸಂಘಪರಿವಾರದ ದುಷ್ಕರ್ಮಿಗಳು ನಡೆಸಿದ ವ್ಯಾಪಕ ಹಿಂಸಾಚಾರದಲ್ಲಿ ಮಸೀದಿ, ಮನೆ ಮತ್ತು ಅಂಗಡಿ ಮುಂಗಟ್ಟು ಧ್ವಂಸ ಸೇರಿದಂತೆ ನರಮೇಧದಿಂದಾಗಿ ಮುಸ್ಲಿಮರು ಭಯದಲ್ಲಿ ಜೀವಿಸುವಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.



Join Whatsapp