ತಿರುಪತಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಬೇಕು ಎಂದು ಯೋಗ ಗುರು, ಪತಂಜಲಿ ಪೀಠ ಮುಖ್ಯಸ್ಥ ಬಾಬಾ ರಾಮದೇವ್ ಆಗ್ರಹಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿಯ ಮಹತಿ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ‘ಗೋ ಮಹಾ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಕಾನೂನು ತರಬೇಕು. ಗೋ ಮಹಾ ಸಮ್ಮೇಳನದ ನಿರ್ಣಯಗಳು ಎಲ್ಲಾ ಗೋ ಪ್ರೇಮಿಗಳಲ್ಲಿ ಪ್ರತಿಧ್ವನಿಸುತ್ತವೆ ಎಂದು ಹೇಳಿದರು.