ಕೊಕೊ ಕೋಲಾಗೆ ವಿರೋಧ; ರೊನಾಲ್ಡೊ ಬಳಿಕ ಡೇವಿಡ್ ವಾರ್ನರ್ ಸರದಿ ..!

Prasthutha|

ದುಬೈ : ಯುಇಎಫ್ಎ ಯೂರೋ 2020 ಟೂರ್ನಿಯ ವೇಳೆ ಪತ್ರಿಕಾಗೋಷ್ಠಿಯಲ್ಲಿ ಪೋರ್ಚುಗೀಸ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಕೊಕಾ ಕೋಲಾದ ಬಾಟಲಿಗಳನ್ನು ಬದಿಗಿರಿಸಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ಇದೇ ಘಟನೆ ಪುನರಾವರ್ತನೆಯಾಗಿದೆ.

- Advertisement -


ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 7 ವಿಕೆಟ್’ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತ್ತು. ಬಳಿಕ ನಡೆದ ಪತ್ರಿಕಾಗೋಷ್ಠಿಗೆ ಅಗಮಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ರೊನಾಲ್ಡೋ ನಡೆಯನ್ನು ಮುಂದುವರಿಸಿದ್ದಾರೆ.
ಡೇವಿಡ್ ವಾರ್ನರ್ ಪತ್ರಿಕಾಗೋಷ್ಠಿಗೆ ಆಗಮಿಸಿದ ವೇಳೆ ಟೇಬಲ್ ಮೇಲೆ ಎರಡು ನೀರಿನ ಬಾಟಲ್’ ಗಳ ಜೊತೆಗೆ ಎರಡು ಕೊಕಾ ಕೋಲಾ ಬಾಟಲ್ ’ಗಳನ್ನು ಇಡಲಾಗಿತ್ತು. ಮೊದಲಿಗೆ ಕೊಕಾ ಕೋಲಾ ಬಾಟಲಿಗಳನ್ನು ತೆಗೆದು ಕೆಳಗಿಡಲು ನೋಡಿದ ವಾರ್ನರ್, ನಾನು ಇದನ್ನು ತೆಗೆಯಬಹುದೇ ? ಕ್ರಿಸ್ಟಿಯಾನೋಗೆ ಇದು ಸರಿಯಾಗಿ ಕಂಡಿದ್ದರೆ ನನಗೂ ಇದು ಒಳ್ಳೆಯದು ನಗುತ್ತಲೇ ಎಂದು ಹೇಳುವ ಮೂಲಕ ಮತ್ತೆ ಕೊಕಾ ಕೋಲಾ ಬಾಟಲ್’ಗಳನ್ನು ಟೇಬಲ್ ಮೇಲಿಟ್ಟರು.


ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಪ್ರಧಾನ ಪ್ರಾಯೋಜಕರಲ್ಲಿ ಕೊಕಾ ಕೋಲಾ ಕಂಪನಿಯೂ ಸೇರಿದೆ. ಹೀಗಾಗಿ ಪತ್ರಿಕಾಗೋಷ್ಠಿ ನಡೆಯುವ ವೇಳೆ ಎರಡು ಕೊಕಾಕೋಲಾ ಬಾಟಲ್’ ಗಳನ್ನು ಟೇಬಲ್ ಮೇಲೆ ಇಡಲಾಗುತ್ತದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡವು 6 ವಿಕೆಟ್ ನಷ್ಟದಲ್ಲಿ 154 ರನ್’ಗಳಸಿತ್ತು. ಚೇಸಿಂಗ್ ವೇಳೆ 17 ಓವರ್;ಗಳಲ್ಲೇ 3 ವಿಕೆಟ್ ಕಳೆದುಕೊಂಡು ಆಸೀಸ್ ಪಡೆ ಗೆಲುವಿನ ನಗೆ ಬೀರಿತ್ತು.



Join Whatsapp