ಮಂಗಳೂರು: ತ್ರಿಶೂಲ ಧೀಕ್ಷೆಯ ಪರಿಣಾಮ ಮೂಡಬಿದ್ರೆ ಪ್ರತಿಷ್ಟಿತ ಕಾಲೆಜೊಂದರ ವಿದ್ಯಾರ್ಥಿಗಳ ಮೇಲೆ ಬಜರಂಗಿ ಗೂಂಡಗಳು ಹಲ್ಲೆ ನಡೆಸಿದ್ದು. ತೀವ್ರ ಗಾಯವಾಗಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಎಸ್.ಡಿ.ಪಿ.ಐ ನಿಯೋಗ.
ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದು, ತ್ರಿಶೂಲ ಧೀಕ್ಷೆಯನ್ನು ಪೋಲೀಸರು ತಡೆಯದೆ ಇದ್ದದ್ದು ಇಂತಹ ಘಟನೆಗಳು ಮರುಕಳಿಸಲು ಕಾರಣ ಎಂದು ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಅದ್ಯಕ್ಷ ಆಸಿಫ್ ಕೋಟೆಬಾಗಿಲು ಆಕ್ರೋಶ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಮೂಡಬಿದ್ರೆ ಕ್ಷೇತ್ರ ಕಾರ್ಯದರ್ಶಿ ಅಝರ್ ತೋಡಾರು, ಮೂಡಬಿದ್ರೆ ಬ್ಲಾಕ್ ಅದ್ಯಕ್ಷ ಆಸಿಫ್ ತೋಡಾರು ಬ್ಲಾಕ್ ಕಾರ್ಯದರ್ಶಿ ಶೆಹರಾಝ್ ಮೊಹಲ್ಲಾ, ಸಮಿತಿ ಸದಸ್ಯ ಇಬ್ರಾಹಿಂ ಹಂಡೇಲು, ಮತ್ತು ಅನ್ಸಾಫ್ ಉಪಸ್ಥಿತರಿದ್ದರು.