ಕ್ರೂಸ್ ಡ್ರಗ್ಸ್ ಪ್ರಕರಣ | ಶಾರುಖ್ ಖಾನ್ ಪುತ್ರ ಆರ್ಯನ್ ಗೆ ಜಾಮೀನು ಮಂಜೂರು

Prasthutha|

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರ್ಯನ್ ಖಾನ್ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

- Advertisement -

26 ದಿನಗಳ ಬಳಿಕ ಆರ್ಥರ್ ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆಯಾಗಲಿದ್ದಾರೆ. ಆರ್ಯನ್ ಸೇರಿ ಅರ್ಬಾಝ್ ಮರ್ಚೆಂಟ್, ಮುನ್ ಮುನ್ ದಾಮೇಚಾ ಅವರಿಗೂ ಜಾಮೀನು ಲಭಿಸಿದೆ. ಜಾಮೀನಿನ ಷರತ್ತನ್ನು ನಾಳೆ ತಿಳಿಸುವುದಾಗಿ ಪೀಠ ತಿಳಿಸಿದೆ.


ಮುಂಬೈನ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ತಂಡ ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮೂವರನ್ನು ಬಂಧಿಸಿತ್ತು.
ಈ ಪ್ರಕರಣದಲ್ಲಿ ಎನ್.ಸಿ.ಬಿ ತಂಡ ಬಂಧಿತರನ್ನು 2 ದಿನಗಳ ಪೊಲೀಸ್ ಕಸ್ಟಡಿಯ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಸಕ್ತ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆದಿದ್ದು, ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಮುಂಬೈ 3 ಬಾರಿ ತಿರಸ್ಕರಿಸಿತ್ತು.

- Advertisement -

ಮಂಗಳವಾರ ಮತ್ತೆ ಮುಂಬೈ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರು. ಗುರುವಾರ ಮತ್ತೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರ್ಯಾನ್ ಖಾನ್ ಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.



Join Whatsapp