ದಲಿತರಿಗೆ ಕ್ಷೌರ ನಿರಾಕರಣೆ| ಮಂಡ್ಯದಲ್ಲೊಂದು ಅಮಾನವೀಯ ಅಸ್ಪೃಶ್ಯತೆ ಆಚರಣೆ!

Prasthutha|

ಮಂಡ್ಯ: ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿ ಅಸ್ಪೃಶ್ಯತೆ ಆಚರಿಸುತ್ತಿರುವ ಅಮಾನವೀಯ ಪ್ರಕರಣ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ವರದಿಯಾಗಿದೆ.

- Advertisement -


ಗ್ರಾಮದ ಯಜಮಾನರ ಒಪ್ಪಿಗೆ ಇಲ್ಲದೆ ದಲಿತರಿಗೆ ಕ್ಷೌರ ಮಾಡಲು ಸಾಧ್ಯವಿಲ್ಲ ಎಂದ ಮಂಡ್ಯ ಜಿಲ್ಲೆಯ ಕಣಿವೆಕೊಪ್ಪಲು ಗ್ರಾಮದಲ್ಲಿ ಆರಂಭವಾಗಿರುವ ಸ್ನೇಹಜೀವಿ ಮೆನ್ಸ್ ಬ್ಯೂಟಿ ಪಾರ್ಲರ್‌ನ ಕ್ಷೌರಿಕನ ಹೇಳಿಕೆಯನ್ನು ಪ್ರಶ್ನಿಸಿ ಗ್ರಾಮದ ದಲಿತ ನಾಯಕರೊಬ್ಬರು ಪ್ರತಿಭಟಿಸಿದ ನಂತರ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದರಿಂದ ದಲಿತರಿಗೆ ಕ್ಷೌರ ಮಾಡಲಾಗಿದೆ ಎಂದು ತಿಳಿದು ಬಂದಿದೆ.


ದಲಿತ ಮುಖಂಡ ಚೆಲುವರಾಜು ಅವರು, ಇಂದು ಬೆಳಿಗ್ಗೆಯಿಂದ ಇಬ್ಬರು ದಲಿತರಿಗೆ ನೀವು ಕ್ಷೌರ ಮಾಡಲು ನಿರಾಕರಿಸಿದ್ದೀರಿ. ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದು ಹೇಳಿದಾಗ ಅಲ್ಲೆ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ಮೇಲ್ಜಾತಿಗೆ ಸೇರಿದವನೊಬ್ಬ ಹಿಂದೆ ಮಾಡಿಲ್ಲ, ಹೀಗಲೂ ಮಾಡುವುದಿಲ್ಲ ಎಂದು ಹೇಳಿದ್ದಾನೆ. ನಂತರ ಚೆಲುವರಾಜುರವರು ದಲಿತ ಯುವಕರ ಜೊತೆ ಸೇರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಅಂಗಡಿ ಮಾಲೀಕನಿಗೆ ಬುದ್ದಿ ಹೇಳಿ ಅಲ್ಲಿಯೇ ದಲಿತ ಯುವಕರಿಗೆ ಕ್ಷೌರ ಮಾಡಿಸಿದ್ದಾರೆ.

Join Whatsapp