ಬಂಟ್ವಾಳ | ಬಿಜೆಪಿ ಮುಖಂಡನ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

Prasthutha|

ದ. ಕನ್ನಡದಲ್ಲಿ ತ್ರಿಶೂಲ ದೀಕ್ಷೆಯ ಬಳಿಕ ಹೆಚ್ಚಾಯಿತೇ ಹಲ್ಲೆ ಪ್ರಕರಣಗಳು ?

- Advertisement -

ಬಂಟ್ವಾಳ: ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಅವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರು ಬಜರಂಗದಳ ಕಾರ್ಯಕರ್ತರು ಎಂದು ಸ್ಥಳಿಯರು ದೂರಿದ್ದಾರೆ. ಗಾಯಗೊಂಡ ಪ್ರಕಾಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ವೇಳೆ ಪ್ರಕಾಶ್ ಅವರ ತಲೆಗೆ ಗಾಯಗಳಾಗಿದ್ದು, ಹಲ್ಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ. ಬಜರಂಗದಳ ಕಾರ್ಯಕರ್ತರಾಧ ನಿತಿನ್ ಬಡಗಬೆಳ್ಳೂರು ಮತ್ತು ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

ಹಲ್ಲೆ ನಡೆಸಿದ ಬಳಿಕ ಜನ ಸೇರಿದ್ದನ್ನು ಕಂಡು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ತ್ರಿಶೂಲ ದೀಕ್ಷೆಯ ಬಳಿಕ ಹೆಚ್ಚಾಯಿತೇ ಹಲ್ಲೆ ಪ್ರಕರಣಗಳು ?

ಶಾಂತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಘಪರಿವಾರ ಮತ್ತು ಇನ್ನಿತರ ಹಿಂದುತ್ವ ಸಂಘಟನೆಗಳು ತನ್ನ ಕಾರ್ಯಕರ್ತರಿಗೆ ತ್ರಿಶೂಲವನ್ನು ವಿತರಿಸುವ ಮೂಲಕ ಜೆಲ್ಲೆಯನ್ನು ಕೋಮು ಹಿಂಸೆಗೆ ತಳ್ಳುತ್ತಿದೆಯೇ ಎಂದು ಸಾರ್ವಜನಿಕರು ಆತಂಕ ಪಡಿಸಿದ್ದಾರೆ. ಸಂಘಪರಿವಾರ ಕಳೆದ ಆಯುಧ ಪೂಜೆಯ ದಿನದಂದು ತನ್ನ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿದ ಬಳಿಕ ಜೆಲ್ಲೆಯಲ್ಲಿ ಅಲ್ಲಲ್ಲಿ ಕೆಲವೊಂದು ಹಿಂಸೆಗಳು, ಹಲ್ಲೆಗಳು ಹೆಚ್ಚಾಗುತ್ತಿದ್ದು , ಶಾಂತವಾಗಿರುವ ಜಿಲ್ಲೆಯನ್ನು ಅಶಾಂತಿಯತ್ತ ಕೊಂಡೊಯ್ಯುವ ಹುನ್ನಾರ ನಡೆಯುತ್ತಿದೆಯೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ ಎನ್ನಲಾಗಿದೆ.



Join Whatsapp