ಇಫ್ತಾರ್ ಕೂಟಕ್ಕೆ ಪೈಪೋಟಿ ನಡೆಸುತ್ತಿದ್ದವರು ರಾಮನ ಜಪ ಶುರುಹಚ್ಚಿಕೊಂಡಿದ್ದಾರೆ | ಕೇಜ್ರಿ ರಾಮಮಂದಿರ ಭೇಟಿಗೆ ಯೋಗಿ ಲೇವಡಿ

Prasthutha|

ಉತ್ತರಪ್ರದೇಶ: ಅಯೋಧ್ಯೆಯಲ್ಲಿನ ತಾತ್ಕಾಲಿಕ ರಾಮಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಲೇವಡಿ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನ ಸಭಾ ಚುನಾವಣೆಗೆ ಮುನ್ನ ದೆಹಲಿ ಸಿಎಂ ರಾಮನನ್ನು ಸ್ಮರಿಸುತ್ತಿದ್ದಾರೆ ಎಂದು ಹೇಳಿದ್ದಾರೆ, ಅಲ್ಲದೇ ಇಫ್ತಾರ್ ಕೂಟಗಳನ್ನು ನಡೆಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ದವರು ಈಗ ರಾಮನ ಜಪ ಶುರುಹಚ್ಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಅರವಿಂದ್ ಕೇಜ್ರಿವಾಲ್ ಅವರು ಋಷಿಕೇಶ, ಶಿರಡಿ, ಹರಿದ್ವಾರ, ವೈಷ್ಣೋದೇವಿ, ಸೇರಿದಂತೆ ಕೆಲವು ಧಾರ್ಮಿಕ ಸ್ಥಳಗಳಿಗೆ ದೆಹಲಿಯ ಜನತೆಗೆ ಉಚಿತ ತೀರ್ಥಯಾತ್ರೆಯನ್ನು ಘೋಷಿಸಿದ್ದಾರೆ. ತೀರ್ಥಯಾತ್ರೆ ಪಟ್ಟಿಯಲ್ಲಿ ಶ್ರೀರಾಮ ಮಂದಿರದ ಭೇಟಿಯನ್ನೂ ಸೇರಿಸಲಾಗುವುದು ಎಂದು ಈ ಸಂದರ್ಭ ಹೇಳಿದ್ದಾರೆ. ಈ ಬಗ್ಗೆ ಕೇಜ್ರಿವಾಲ್ ಹೇಳಿಕೆಗೆ ತಿರುಗೇಟು ನೀಡಿರುವ ಆದಿತ್ಯನಾಥ್, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಯುಪಿ ಮತ್ತು ಬಿಹಾರದ ವಲಸೆ ಕಾರ್ಮಿಕರ ಸಾಮೂಹಿಕ ವಲಸೆಯನ್ನು ಉಲ್ಲೇಖಿಸಿ, ರಾಜ್ಯದಿಂದ ತಾವೇ ಓಡಿಸಿದ ಜನರಿಗೆ ಹೇಗೆ ಉಚಿತ ಕೊಡುಗೆಗಳನ್ನು ಕೇಜ್ರಿವಾಲ್ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮತ್ತು ‘ದೆಹಲಿಯಂತಹ ಸಣ್ಣ ರಾಜ್ಯವನ್ನು ನಿಭಾಯಿಸಲು ಸಾದ್ಯವಾದ ಕೇಜ್ರಿವಾಲ್ ಅವರು ಉತ್ತರ ಪ್ರದೇಶದ ಮೇಲೆ ಕಣ್ಣಿಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಹೋಳಿ, ದೀಪಾವಳಿ ಮತ್ತು ದಸರಾದಂತಹ ಹಬ್ಬಗಳ ಮೊದಲು ಕರ್ಫ್ಯೂಗಳನ್ನು ವಿಧಿಸಲಾಗುತ್ತಿತ್ತು. ಹಬ್ಬಗಳನ್ನು ಆಚರಿಸಲು ಇವರೆಲ್ಲರೂ ಬಿಡುತ್ತಿರಲಿಲ್ಲ’. ‘ಆಗ ಅವರು ತಮ್ಮ ನಂಬಿಕೆಯನ್ನು ಜೈಲಿನಲ್ಲಿ ಇಡುತ್ತಿದ್ದರು, ಆದರೆ ಇಂದು ಹಾಗಲ್ಲ’ ಎಂದು ಅವರು ಯೋಗಿ ವಾಗ್ದಾಳಿ ನಡೆಸಿದ್ದಾರೆ.

- Advertisement -

ಮುಂಬರುವ ಚುನಾವಣೆ ಉದ್ದೇಶದಿಂದ ರಾಮನನ್ನು ನಿಂದಿಸುತ್ತಿದ್ದವರು ಈಗ ರಾಮನಿಗೆ ನಮನ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದು ಒಳ್ಳೆಯ ಬೆಳವಣಿಗೆ. ಕನಿಷ್ಠ ಅವರು ರಾಮನ ಅಸ್ತಿತ್ವ ಮತ್ತು ಪ್ರಾಮುಖ್ಯತೆಯನ್ನು ಒಪ್ಪಿಕೊಂಡಂತೆ ಆಗಿದೆ ಎಂದು ಹೇಳಿದರು. ಮತ್ತು
‘ಇದು ಹಿಂದಿನ ಮತ್ತು ಇಂದಿನ ಸರ್ಕಾರಗಳ ನಡುವಿನ ವ್ಯತ್ಯಾಸವಾಗಿದೆ ಇದನ್ನು ನಾವು ಎಲ್ಲರಿಗೂ ತಿಳಿಸಬೇಕಾಗಿದೆ’ಎಂದು ಯೋಗಿ ಹೇಳಿದ್ದಾರೆ.

Join Whatsapp