639 ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್ ಸ್ಟೆಬಲ್ ಹುದ್ದೆಗೆ ಪರೀಕ್ಷೆ

Prasthutha|

ಬೆಂಗಳೂರು : ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಗಳ ಅರ್ಹತಾ ಪರೀಕ್ಷೆ ರಾಜ್ಯಾದ್ಯಂತ ಇಂದು ಸುಸೂತ್ರವಾಗಿ ನೆರವೇರಿತು.ರಾಜಧಾನಿ ಸೇರಿ ರಾಜ್ಯದ 639 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

- Advertisement -


ಹಿಂದಿನ ಪರಿಕ್ಷೆಗಳಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಪ್ರತಿಯೊಬ್ಬ ಅಭ್ಯರ್ಥಿ ಮೇಲೆ ನಿಗಾ ವಹಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಿಂದ ಬಯೋಮೆಟ್ರಿಕ್ ಬಳಕೆ ಮಾಡಲಾಗಿತ್ತು. 3.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ರಾಜ್ಯದ 639 ಸೆಂಟರ್ ಗಳಲ್ಲಿ ಪರೀಕ್ಷೆ ನಡೆಯುತ್ತಿದೆ.


ಈ ಹಿಂದೆ ಅಭ್ಯರ್ಥಿಗಳ ಹೆಸರಲ್ಲಿ ಬೇರೊಬ್ಬರು ಪರೀಕ್ಷೆ ಬರೆದ ಘಟನೆಗಳು ನಡೆದಿದ್ದವು. ಕೇವಲ ಒಂದೆಡೆ ಅಲ್ಲದೇ ಹಲವು ಕಡೆ ಈ ರೀತಿಯ ಘಟನೆ ಸಂಭವಿಸಿದ್ದವು. ಇದಾದ ಬಳಿಕ ಪರಿಕ್ಷಾ ಕ್ರಮ ಬಿಗಿ ಮಾಡಿದ ಪೊಲೀಸರು, ಈ ಬಾರಿ ಯಾವುದೇ ಅಡ್ಡದಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಿಗಾ ವಹಿಸಿದ್ದಾರೆ.



Join Whatsapp