ಹಿಂದೂ ಮಹಾಸಭಾ ಮತ್ತು ಸಾವರ್ಕರ್ ಸ್ವಾತಂತ್ರ್ಯ ಹೋರಾಟದಿಂದ ದೂರವುಳಿದಿದ್ದರು: ಗಾಂಧೀಜಿ ಮೊಮ್ಮಗ

Prasthutha|

ಹೊಸದಿಲ್ಲಿ: ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಸ್ವಾತಂತ್ರ್ಯ ಹೋರಾಟದಿಂದ ದೂರವುಳಿದಿದ್ದರು ಎಂದು ಗಾಂಧೀಜಿಯ ಮೊಮ್ಮಗ ಮತ್ತು ಇತಿಹಾಸಕಾರ ರಾಜಮೋಹನ್ ಗಾಂಧಿ ಹೇಳಿದ್ದಾರೆ.

- Advertisement -

ಸಾವರ್ಕರ್ ಜೈಲು ಬಿಡುಗಡೆಗಾಗಿ ಬ್ರಿಟಿಷರ ಬಳಿ ಕ್ಷಮೆಯಾಚನೆಗೆ ಮಹಾತ್ಮ ಗಾಂಧಿ ಸೂಚನೆ ನೀಡಿದ್ದರು ಎಂಬ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರ ಹೇಳಿಕೆ ಸಂಪೂರ್ಣ ತಪ್ಪು ಎಂದು ಇತಿಹಾಸಕಾರ ಕರಣ್ ಥಾಪರ್ ಅವರ ಜೊತೆ ನಡೆಸಿದ ಸಂದರ್ಶನದಲ್ಲಿ ರಾಜಮೋಹನ್ ಗಾಂಧಿ ಹೇಳಿದ್ದಾರೆ.

1939 ರಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲೂ ಸಾವರ್ಕರ್ ಭಾರತದಲ್ಲಿ ಬ್ರಿಟಿಷ್ ಆಡಳಿತಗಾರರ ಪರವಾಗಿ ನಿಂತರು. ಮುಖ್ಯ ಶತ್ರುಗಳು ಬ್ರಿಟಿಷರಲ್ಲ ಮುಸ್ಲಿಮರು ಎಂದು ಅವರು ನಿರ್ಧರಿಸಿದ್ದರು. ಇದಕ್ಕೆ ನಿರಾಕರಿಸಲಾಗದ ಮತ್ತು ದಾಖಲಿತ ಪುರಾವೆಗಳಿವೆ ಎಂದು ರಾಜ್ ಮೋಹನ್ ಗಾಂಧಿ ಹೇಳಿದ್ದಾರೆ.

- Advertisement -

ಆದರೆ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಹೆಚ್ಚಿನ ಭಾರತೀಯರು ಬ್ರಿಟಿಷರನ್ನು ಮುಖ್ಯ ಶತ್ರುಗಳೆಂದು ಕಂಡಿದ್ದಾರೆ ಎಂದು ಅವರು ಹೇಳಿದರು.

Join Whatsapp