T-20 ವಿಶ್ವಕಪ್ ಅಭ್ಯಾಸ ಪಂದ್ಯ; ಬಲಿಷ್ಠ ಆಸ್ಟ್ರೇಲಿಯಾಗೆ ಭಾರತ ಸವಾಲು

Prasthutha|

ದುಬೈ : ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದ್ದು, ವಿಶ್ವಕಪ್’ ಗೆ ತಂಡವನ್ನು ಸಂಯೋಜಿಸಲು ಅಭ್ಯಾಸ ಪಂದ್ಯ ಸಹಕಾರಿಯಾಗಲಿದೆ.

- Advertisement -


ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಹುಲ್-ಇಶನ್ ಕಿಶಾನ್ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆದರೆ ಬುಧವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವ ಸಾಧ್ಯತೆ ಇದೆ. ಹೀಗಾಗಿ ರಾಹುಲ್-ಕಿಶಾನ್ ನಡುವೆ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಮೂರನೇ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಕ್ರೀಸ್ಗಿಳಿಯುವುದು ನಿಶ್ಚಿತ.


ಹಾರ್ದಿಕ್ ಪಾಂಡ್ಯ ಬ್ಯಾಟ್’ನಿಂದ ರನ್ ಬಾರದೇ ಇರುವುದು ಹಾಗೂ ಬೌಲಿಂಗ್ ಮಾಡದೇ ಇರುವುದರಿಂದ ಅವರ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಎಂಟ್ರಿ ಪಡೆಯುವ ಸಾಧ್ಯತೆ ಇದೆ. ರಾಹಲು ಚಾಹರ್ ಬದಲು ರವೀಂದ್ರ ಜಡೇಜಾ ಆಡುವುದು ಬಹುತೇಕ ಪಕ್ಕಾ ಆಗಿದೆ.
ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧ ಭಾರತ ಮೊದಲ ಪಂದ್ಯವನ್ನು ಆಡಲಿದ್ದು, ಈ ಹೈ ವೋಲ್ಟೇಜ್ ಪಂದ್ಯಕ್ಕೆ ಹನ್ನೊಂದರ ಬಳಗದ ಆಯ್ಕೆಗೆ ಅಭ್ಯಾಸ ಪಂದ್ಯ ಪೂರ್ವ ತಯಾರಿಯಂತಿದೆ.

- Advertisement -

ಆಸ್ಟ್ರೇಲಿಯಾ ಪಾಳೆಯದಲ್ಲೂ ಪ್ಲಾನಿಂಗ್’ಇದುವರೆಗೆ ಟಿ-20 ವಿಶ್ವಕಪ್ ಜಯಿಸಲು ವಿಫಲವಾಗಿರುವ ಆಸ್ಟ್ರೇಲಿಯಾ ತಂಡ ಈ ಬಾರಿ ಶತಾಯಗತಾಯ ಟ್ರೋಫಿ ಜಯಿಸುವ ಉತ್ಸಾಹದಲ್ಲಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಖಾತೆ ತೆರೆಯಯುವ ಮುನ್ನವೇ, ಗಪ್ಟಿಲ್ ಹಿಡಿದ ಅದ್ಭುತ ಕ್ಯಾಚ್’ಗೆ ಬಲಿಯಾಗಿದ್ದ ಡೇವಿಡ್ ವಾರ್ನರ್ ಬುಧವಾರದ ಪಂದ್ಯದಲ್ಲಿ ಫಾರ್ಮ್ ಕಂಡುಕೊಳ್ಳಲೇ ಬೇಕಾಗಿದೆ.



Join Whatsapp