ಪಾನಮತ್ತನಾಗಿ ವಾಹನ ಚಲಾಯಿಸಿದ ಸಂಬಂಧಿ ಪರ ಠಾಣೆಯಲ್ಲೇ ಧರಣಿ ನಡೆಸಿದ ಶಾಸಕಿ

Prasthutha|

ಜೋಧಪುರ: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧಿತ ಸಂಬಂಧಿಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಶಾಸಕಿ ಮೀನಾ ಕನ್ವಾರ್ ಮತ್ತು ಪತಿ ಠಾಣೆಯಲ್ಲೇ ಧರಣಿ ನಡೆಸಿದ್ದಾರೆ.

- Advertisement -

ಪ್ರಸಕ್ತ ಧರಣಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈಗಿನ ಕಾಲಘಟ್ಟದಲ್ಲಿ ಮಕ್ಕಳು ಕುಡಿಯುವುದು ಸರ್ವೇ ಸಾಮಾನ್ಯ ಎಂದು ಅವರು ಪೊಲೀಸರಲ್ಲಿ ವಾದಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಶಾಸಕಿಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



Join Whatsapp