Jashn-e-Riwaazz ಜಾಹೀರಾತು ಹಿಂಪಡೆದ ಫ್ಯಾಬ್ ಇಂಡಿಯಾ!

Prasthutha|

ಬೆಂಗಳೂರು: ಫ್ಯಾಬ್ ಇಂಡಿಯಾ ಸಂಸ್ಥೆಯು ‘ಜಶ್ನ್-ಇ- ರೀವಾಜ್’ ಹೆಸರಿನಲ್ಲಿ ಪ್ರಕಟಿಸಿದ್ದ ಜಾಹೀರಾತನ್ನು ಹಿಂಪಡೆದಿದೆ.  

- Advertisement -

ಸಂಸ್ಥೆಯು ಅಕ್ಟೋಬರ್ 9ರಂದು ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆ ಸಂಗ್ರಹವನ್ನು ‘ಜಶ್ನ್-ಇ- ರೀವಾಜ್’ ಹೆಸರಿನಲ್ಲಿ ಪ್ರಕಟಿಸಿತ್ತು.

ಈ ಪೋಸ್ಟಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವಿರೋಧವನ್ನ ವ್ಯಕ್ತಪಡಿಸಿ ಬಾಯ್ಕಾಟ್ ಫ್ಯಾಬ್ ಇಂಡಿಯಾ ಅಭಿಯಾನ ನಡೆಸಿದ್ದರು. ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಫ್ಯಾಬ್ ಇಂಡಿಯಾ ಸಂಸ್ಥೆಯ ಈ ಜಾಹೀರಾತನ್ನು ಟ್ವೀಟ್ ಮೂಲಕ ಖಂಡಿಸಿದ್ದರು.

- Advertisement -

ಈ ಜಾಹೀರಾತನ್ನು ಸಂಸ್ಥೆ ಉದ್ದೇಶಪೂರ್ವಕವಾಗಿಯೇ ಹಾಕಿದ್ದು, ಈ ಜಾಹೀರಾತಿನಲ್ಲಿ ಹಿಂದೂಯೇತರ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಾಗಿ ಫ್ಯಾಬ್ ಇಂಡಿಯಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅನೇಕ ವಿವಾದಗಳ ನಂತರ ಫ್ಯಾಬ್ ಇಂಡಿಯಾ ಸಂಸ್ಥೆಯು ತನ್ನ ಜಾಹಿರಾತನ್ನು ಹಿಂಪಡೆದಿದೆ.



Join Whatsapp