ನಕಲಿ ಗೊಬ್ಬರ ತಯಾರಿಕೆ ಪತ್ತೆ, 85 ಮೂಟೆ ವಶ, ರೈತರಿಗೆ ಎಚ್ಚರಿಕೆ

Prasthutha|

ಮೈಸೂರು :ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಹೇಮಾವತಿ ರೈಸ್ ಮಿಲ್‌ನಲ್ಲಿ ನಕಲಿ ಗೊಬ್ಬರ ದಾಸ್ತಾನು ಪ್ರಕರಣ ಪತ್ತೆಯಾಗಿದೆ. ರೈಸ್ ಮಿಲ್‌ನಲ್ಲಿ ದಾಸ್ತಾನು ಮಾಡಿದ್ದ 85 ಮೂಟೆ ನಕಲಿ ಗೊಬ್ಬರವನ್ನು ತಹಶೀಲ್ದಾರ್ ಸಂತೋಷ್ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

- Advertisement -

ಪೋಟಾಷಿಯಂ, ಎಂಒಪಿ, ಉಪ್ಪು, ಡಿಎಪಿ ಇತ್ಯಾದಿ ಬಳಸಿ ತಯಾರಿಸುವ ಗೊಬ್ಬರಗಳ ಮಾದರಿಯಲ್ಲಿ ನಕಲಿ ಗೊಬ್ಬರ, ತಯಾರಿಸಲಾಗಿತ್ತು. ಮಣ್ಣು, ಕೆರೆಯ ಗೋಡು ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ಸಿದ್ಧಪಡಿಸಲಾಗಿತ್ತು. 85 ಮೂಟೆ ನಕಲಿ ಗೊಬ್ಬರ ವಶಕ್ಕೆ ತೆಗೆದುಕೊಂಡು ನಕಲಿ ಗೊಬ್ಬರ ಇಲಾಖಾ ಪರೀಕ್ಷೆಗೆ ರವಾನೆ ಮಾಡಲಾಗಿದೆ. ರೈತರು ಜಾಗರೂಪರಾಗಿರಬೇಕಾದ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp