ನಕಲಿ ಅಂಕಪಟ್ಟಿ ನೀಡಿ ಕಾಲೇಜು ಪ್ರವೇಶ| ಬಿಜೆಪಿ ಶಾಸಕನಿಗೆ ಐದು ವರ್ಷ ಜೈಲು!

Prasthutha|

►28 ವರ್ಷದ ಬಳಿಕ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

- Advertisement -

ಅಯೋಧ್ಯೆ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ತಿವಾರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
28 ವರ್ಷಗಳ ಹಿಂದೆ ನಕಲಿ ಅಂಕಪಟ್ಟಿ ನೀಡಿ ಕಾಲೇಜು ಪ್ರವೇಶ ಪಡೆದ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದ್ದು, ನ್ಯಾಯಾಲಯವು 8,000 ರೂ. ದಂಡವನ್ನೂ ವಿಧಿಸಿದೆ.

ಇಂದ್ರ ಪ್ರತಾಪ್ ತಿವಾರಿ ಅವರು ಉತ್ತರಪ್ರದೇಶದ ಗೊಸೈಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. 1992 ರಲ್ಲಿ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಯದುವಂಶ ರಾಮ್ ತ್ರಿಪಾಠಿ ಸಲ್ಲಿಸಿದ ಪ್ರಕರಣದಲ್ಲಿ ತಿವಾರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

- Advertisement -

ಎರಡನೇ ವರ್ಷದ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ತಿವಾರಿ ನಕಲಿ ಅಂಕಪಟ್ಟಿ ನೀಡಿ ಮೂರನೇ ವರ್ಷದ ತರಗತಿಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆಯ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲರು ಮೃತಪಟ್ಟಿದ್ದರು. ಕಾಲೇಜಿನ ಡೀನ್ ಸೇರಿದಂತೆ ಸಾಕ್ಷಿಗಳು ಪ್ರಾಂಶುಪಾಲರ ವಿರುದ್ಧ ಸಾಕ್ಷ್ಯ ನುಡಿದರೂ, ಪ್ರಕರಣದಲ್ಲಿ ಹಲವು ಸಾಕ್ಷ್ಯಗಳು ನಾಪತ್ತೆಯಾಗಿದ್ದರೂ ತಿವಾರಿಗೆ ಈ ಪ್ರಕರಣದಲ್ಲಿ ಪಾರಾಗಲು ಸಾಧ್ಯವಾಗಲಿಲ್ಲ.

Join Whatsapp