ಬರಗೂರು ಫ್ರಶಸ್ತಿ ಘೋಷಣೆ: ಕಾಸರವಳ್ಳಿ ,ಸಾರಾ ಅಬೂಬಕರ್, ಸುಮಿತ್ರ ಮತ್ತು ಪೋಕಳೆಗೆ ಪ್ರಶಸ್ತಿ

Prasthutha|

ಬೆಂಗಳೂರು: ಬರಗೂರು ಪ್ರತಿಷ್ಠಾನ ನೀಡುವ 2020-2021ನೇ ಸಾಲಿನ ‘ಬರಗೂರು ಪ್ರಶಸ್ತಿ’ ಘೋಷಣೆಯಾಗಿದೆ. , ಪ್ರತಿ ವರ್ಷವೂ ಸೃಜನಶೀಲ ಕ್ಷೇತ್ರವಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ, ಹಿರಿಯ ಕಥೆಗಾರ್ತಿ ಸಾರಾ ಅಬೂಬಕರ್ ಸೇರಿದಂತೆ ನಾಲ್ವರು 2020-2021 ರ ಸಾಲಿನ ಬರಗೂರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

- Advertisement -

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಅಂತರ್ರಾಗಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಗಿರೀಶ್ ಕಾಸರವಳ್ಳಿ, ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸಾರಾ ಅಬೂಬಕರ್, ಸಿನಿಮಾ ಗೀತಗಾಯನ ಹಾಗೂ ಸುಗಮ ಸಂಗೀತ ಖ್ಯಾತಿಯ ಬಿ.ಕೆ.ಸುಮಿತ್ರ ಮತ್ತು ಮರಾಠಿಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಚಂದ್ರಕಾಂತ ಪೋಕಳೆ ಅವರು 2021ರ ಸಾಲಿನ ಬರಗೂರು ಪ್ರಶಸ್ತಿಗೆ ಪಾತ್ರರಾದ ನಾಲ್ವರಾಗಿದ್ದಾರೆ.

ಪ್ರಶಸ್ತಿಯು ಫಲಕದೊಂದಿಗೆ ತಲಾ ಇಪ್ಪತೈದು ಸಾವಿರ ರೂಪಾಯಿಗನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಅ.30ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.



Join Whatsapp