ಮಸೀದಿ ಕಬರಸ್ಥಾನದ ಕಾಂಕ್ರೀಟ್ ರಸ್ತೆ ಸ್ವಚ್ಛತೆ : ಜನ ಮೆಚ್ಚುಗೆ ಪಡೆದ ಉಪ್ಪಿನಂಗಡಿ ಸುಶೀಲಕ್ಕರ ಸೌಹಾರ್ದ ಸೇವೆ !

Prasthutha|

ಉಪ್ಪಿನಂಗಡಿಯ ವಲಾಲ್ ನ  ಸುಶೀಲಕ್ಕ ಎಂಬ ಮಹಿಳೆ ಊರ ಮಸೀದಿಗೆ ಹೋಗುವ ಕಾಂಕ್ರೀಟ್ ರಸ್ತೆಯನ್ನು ಸ್ವಚ್ಚಗೊಳಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ ಸುರಿದಿದ್ದ ಬಿರುಸಿನ ಮಳೆಗೆ ಮಸೀದಿಯ ಕಬರ್ ಸ್ಥಾನಕ್ಕೆ ಹೋಗುವ 300 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯ ತುಂಬೆಲ್ಲಾ  ಕೆಸರು ತುಂಬಿತ್ತು. ಈ ರಸ್ತೆಯಲ್ಲಿ ಕಬರ್ ಸ್ಥಾನಕ್ಕೆ ಊರವರು ಹೋಗುವುದನ್ನು ಅರಿತಿದ್ದ ವಲಾಲ್ ಸುಶೀಲಕ್ಕನವರು ಇಂದು ಮುಂಜಾನೆಯಿಂದಲೇ ಒಬ್ಬಂಟಿಯಾಗಿ ಸ್ವಚ್ಛತೆಗೆ ಮುಂದಾಗಿದ್ದಾರೆ.  

- Advertisement -

ಪೊರಕೆ ಮತ್ತು ಹಾರೆಯ ಮೂಲಕ ರಸ್ತೆಯಲ್ಲಿ ತುಂಬಿದ್ದ ಕಸ ಕಡ್ಡಿ ಮತ್ತು ಕೆಸರನ್ನು ಏಕಾಂಗಿಯಾಗಿ ಶುಚಿಗೊಳಿಸಿದ್ದಾರೆ. ಸುಶೀಲಕ್ಕರ  ಈ ಸೇವೆ ಊರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.  ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಶೀಲಕ್ಕನವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.



Join Whatsapp