ಉತ್ತರ ಪ್ರದೇಶದಲ್ಲಿ ವಕೀಲರ ಗುಂಡಿಕ್ಕಿ ಹತ್ಯೆ: ಕೋರ್ಟ್ ಆವರಣದಲ್ಲೇ ಅಟ್ಟಹಾಸ ಮೆರೆದ ದುಷ್ಕರ್ಮಿಗಳು

Prasthutha|

ಲಕ್ನೋ: ಉತ್ತರ ಪ್ರದೇಶದ ಶಹಜಹಾನ್ ಪುರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿದೆ.

- Advertisement -

ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಮೃತದೇಹ ಪತ್ತೆಯಾಗಿದೆ. ಮಾತ್ರವಲ್ಲ ಮೃತದೇಹದ ಬಳಿ ದೇಶಿ ನಿರ್ಮಿತ ಪಿಸ್ತೂಲು ಕಂಡುಬಂದಿದೆ.

ಉನ್ನತ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



Join Whatsapp