ಜನರು ಈಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Prasthutha|


ಲಾಕ್‌ಡೌನ್ ಕೊನೆಗೊಂಡಿರಬಹುದು ವೈರಸ್ ಇನ್ನೂ ಇದೆ ಎಂದ ಪಿಎಂ

ದೆಹಲಿ,ಅ.20: ಅನೇಕ ಜನರು ಈಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಇದು ಸರಿಯಲ್ಲ. ನೀವು ಅಸಡ್ಡೆ ಹೊಂದಿದ್ದರೆ, ಮಾಸ್ಕ್ ಧರಿಸದೇ ಹೊರನಡೆದರೆ, ನಿಮ್ಮ ಕುಟುಂಬ, ನಿಮ್ಮ ಕುಟುಂಬದ ಮಕ್ಕಳು, ವೃದ್ಧರನ್ನು ತುಂಬಾ ತೊಂದರೆಯಲ್ಲಿರಿಸುತ್ತಿದ್ದೀರಿ, ”ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಕೊರೊನಾ ವೈರಸ್‌ಗೆ ಲಸಿಕೆ ಬರುವವರೆಗೂ ನಾವು ಸುರಕ್ಷಿತವಾಗಿ ಇರಬೇಕು ಎಂದು ಕರೆ ನೀಡಿದ ಪ್ರಧಾನಿ ಮೋದಿ, ಕೊರೊನಾ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಾಗಿರೋದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಕಾಲದಲ್ಲಿ ಸರಣಿ ಹಬ್ಬಗಳು ಬಂದಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು.

. “ಈ ಹಬ್ಬದ ಸಮಯದಲ್ಲಿ ಮಾರುಕಟ್ಟೆಗಳು ಮತ್ತೆ ತೆರೆದುಕೊಂಡಿದೆ. ಲಾಕ್‌ಡೌನ್ ಕೊನೆಗೊಂಡಿರಬಹುದು ಆದರೆ ಕೋವಿಡ್ -19 ಇನ್ನೂ ಮುಂದುವರೆದಿದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಕಳೆದ 7-8 ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದ, ಭಾರತವು ಸ್ಥಿರ ಪರಿಸ್ಥಿತಿಯಲ್ಲಿದೆ, ನಾವು ಅದನ್ನು ಹದಗೆಡಿಸಲು ಬಿಡಬಾರದು ”ಎಂದು ಪ್ರಧಾನಿ ಮೋದಿ ಹೇಳಿದರು.



Join Whatsapp