ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಗೆ ರವಾನಿಸುತ್ತಿದ್ದ ಯೋಧ ರೋಹಿತ್ ಕುಮಾರ್ ಬಂಧನ

Prasthutha|

ಭೋಪಾಲ್: ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಯೋಧನೊಬ್ಬನನ್ನು ಕೇಂದ್ರ ಗುಪ್ತಚರ ಇಲಾಖೆ ಬಂಧಿಸಿದೆ.

- Advertisement -

ಬಂಧಿತ ಯೋಧನನ್ನು ಭೋಪಾಲ್ ಮೂಲದ ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಯೋಧ ರೋಹಿತ್ ಕುಮಾರ್ ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜಸ್ಥಾನದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿ ಕರ್ತವ್ಯದಲ್ಲಿದ್ದ ಮತ್ತೊಬ್ಬ ಯೋಧ ರಾಮ್ ಸಿಂಗ್ ನನ್ನು ಬುಧವಾರ ಬಂಧಿಸಲಾಗಿತ್ತು.

- Advertisement -

ಯೋಧನ ತಂದೆಯ ಖಾತೆಗೆ ಹಣ ಬಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp