‘ಮಹಾತ್ಮ ಗಾಂಧಿ ರಾಷ್ಟ್ರಪಿತ ಅಲ್ಲ’: ವಿವಾದಾತ್ಮಕ ಹೇಳಿಕೆ ನೀಡಿದ ಸಾವರ್ಕರ್ ಮೊಮ್ಮಗ

Prasthutha|

ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರಪಿತ ಅಲ್ಲ ಎಂದು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -

ಭಾರತದಂತಹ ದೇಶದಲ್ಲಿ ಕೇವಲ ಒಬ್ಬ ರಾಷ್ಟ್ರಪಿತವಲ್ಲ ಇರಬೇಕಾಗಿರುವುದು ಎಂದು ಅವರು. ಈ ದೇಶ ಐವತ್ತು ವರ್ಷಗಳಲ್ಲ, ಬದಲಾಗಿ ಐನೂರು ವರ್ಷಗಳಷ್ಟು ಹಳೆಯದು. ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ. ಭಾರತದಂತಹ ದೇಶದಲ್ಲಿ ಕೇವಲ ಒಬ್ಬ ರಾಷ್ಟ್ರಪಿತನಲ್ಲ ಇರಬೇಕಾಗಿರುವುದು ಎಂದು ಅವರು ಸುದ್ದಿಸಂಸ್ಥೆ ANI ಗೆ ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸೂಚನೆಯ ಮೇರೆಗೆ ಜೈಲಿನಿಂದ ಬಿಡುಗಡೆಗಾಗಿ ಸಾವರ್ಕರ್ ಬ್ರಿಟಿಷರ ಕ್ಷಮೆ ಕೋರಿದ್ದರು ಎಂದು ಇತ್ತಿಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ರಾಜನಾಥ್ ಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

- Advertisement -

ಇದಕ್ಕೆ ಪ್ರತಿಕ್ರಿಯಿಸಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ಐತಿಹಾಸಿಕ ಘಟನೆಗಳನ್ನು ಬಿಜೆಪಿಗರು ತಿರುಚುತ್ತಿದ್ದಾರೆ ಎಂದು ಟೀಕಿಸಿದ್ದರು. ಹೀಗೆಯೇ ಮುಂದುವರಿದರೆ ಸಾವರ್ಕರ್ ನನ್ನು ಬಿಜೆಪಿ ರಾಷ್ಟ್ರಪಿತ ಎಂದು ಘೋಷಿಸಲಿದೆ ಎಂದು ಓವೈಸಿ ಹೇಳಿದ್ದರು.



Join Whatsapp