ಡಿ.ಕೆ. ಶಿವಕುಮಾರ್ ವಿರುದ್ಧ ಹೇಳಿಕೆ ಬಹಿರಂಗ: ಸ್ಪಷ್ಟನೆ ನೀಡಿದ ಸಲೀಂ

Prasthutha|

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸ್ಥಾನದಿಂದ ಅಮಾನತುಗೊಂಡ ಸಲೀಂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

- Advertisement -


ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲು ಅವರ ಆಪ್ತರ ಮೇಲೆ Ed ಹಾಗೂ IT ಮುಖಾಂತರ ಗೂಬೆ ಕೂರಿಸುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸುತ್ತಿದೆವು, ಈ ವಿಷಯವನ್ನು ಮುಂದುವರೆಸಿ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ನೀರಾವರಿ ಹಗರಣದ ಬಗ್ಗೆ ಯಡಿಯೂರಪ್ಪ ರವರ ಪುತ್ರ ವಿಜಯೇಂದ್ರರ ಆಪ್ತನಾಗಿದ್ದ ಉಮೇಶ್ ಅವರ ಮೇಲೆ ನೇರ ಆರೋಪ ಕೇಳಿಬರುತ್ತಿದೆ ಈ ವಿಷಯವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಕುಮಾರಸ್ವಾಮಿ ಹಾಗೂ ಇತರೆ ನಾಯಕರು ಕಾಂಗ್ರೆಸ್ ನಾಯಕರ ಮೇಲೆ ಆರೋಪ ಹೊರಿಸುತ್ತಿರುವ ವಿಚಾರವನ್ನು ಶಿವಮೊಗ್ಗದಲ್ಲಿಯು ಕೂಡ ಚರ್ಚೆ ನಡೆಸುತ್ತಿದ್ದರು. ಈ ವಿಷಯ ನಮ್ಮ ಗಮನಕ್ಕೂ ಬಂದಿದ್ದು ಏಕೆಂದರೆ ನಾನೂ ಶಿವಮೊಗ್ಗ ಮೂಲದವನಾಗಿದ್ದರಿಂದ ನನ್ನ ಬಿಜೆಪಿಯ ಕೆಲ ಸ್ನೇಹಿತರು ಈ ಬಗ್ಗೆ ತಿಳಿಸಿದ್ದರು, ಈ ವಿಷಯವನ್ನು ಉಗ್ರಪ್ಪರ ಬಳಿ ಚರ್ಚೆ ನಡೆಸುತ್ತಿದ್ದೆ, ಯಡಿಯೂರಪ್ಪನವರ ಅಪ್ತ ವಲಯದಲ್ಲಿರುವ ವ್ಯಕ್ತಿಗಳು 700 ಕೋಟಿಗು ಹೆಚ್ಚು ಹಗರಣ ಮಾಡಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದೆ ಆದರೆ ಇದನ್ನು ಮರೆಮಾಚಲಾಗಿದೆ ಎಂದು ಸಲೀಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿ.ಕೆ ಶಿವಕುಮಾರ್ ರವರು ನಮ್ಮಂತಹ ಅನೇಕ ಪಕ್ಷದ ಕಾರ್ಯಕರ್ತರಿಗೆ ರಾಜಕೀಯವಾಗಿ ಅವಕಾಶಗಳನ್ನು ನೀಡಿದ್ದಾರೆ,

ಪಕ್ಷವನ್ನು ತಾಯಿಯಂತೆ ಕಾಣುವ ನಾನು, ಕಾಂಗ್ರೆಸ್ ಪಕ್ಷ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ಬದ್ಧನಾಗಿರುತ್ತೇನೆ , ನನ್ನ ಪ್ರಾಣ ಇರುವವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ, ಈ ವಿಷಯವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡು ಹೇಸಿಗೆ ರಾಜಕಾರಣ ಮಾಡುತ್ತಿರುವ ಬಿಜೆಪಿಯವರು ಕುಡಿತದ ಮತ್ತಿನಲ್ಲಿ ಏನೇನೋ ಪ್ರಸ್ತಾಪಿಸುತ್ತಿದ್ದಾರೆ,

- Advertisement -

ಬಿಜೆಪಿಯ ಹಲವು ನಾಯಕರ ವರ್ತನೆಯನ್ನು ಖಂಡಿಸುತ್ತೇವೆ , ಗೃಹ ಸಚಿವರ ಹೇಳಿಕೆ ಹಾಸ್ಯಾಸ್ಪದ, ಮೊದಲು ಬಿಜೆಪಿ ನಾಯಕರ ಮೇಲಿರುವ ದೂರಿನ ಬಗ್ಗೆ ತನಿಖೆ ನಡೆಸಿದರೆ ಎಷ್ಟು ಜನ ಜೈಲು ಪಾಲಾಗುತ್ತಾರೆ ಎಂಬುದನ್ನು ನೋಡಿಕೊಳ್ಳಲಿ, ಸಿಟಿ ರವಿಯೊಬ್ಬ ನಿರುದ್ಯೋಗಿ ಹಾಗೂ ಕೊತ್ವಾಲನ ರಕ್ತಸಂಬಂಧಿ ಎಂಬಂತೆ ಕಾಣುತ್ತಿದೆ. ಮೊದಲು ಇದನ್ನು ಪರೀಕ್ಷಿಸಿಕೋ, ಡಿ.ಕೆ. ಶಿವಕುಮಾರ್ ನಮ್ಮಂತಹ ಎಷ್ಟೋ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ನೀಡಿದ್ದಾರೆ , ಇವರ ಬಗ್ಗೆ ಯಾವುದೇ ತರಹ ಕೆಟ್ಟ ಹೇಳಿಕೆಗಳನ್ನು ನೀಡಿಲ್ಲ, ಆದಾಗ್ಯೂ ಮಾಧ್ಯಮಗಳ ಬಿತ್ತರವಾಗಿರುವ ಮಾಹಿತಿಯಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮುಜುಗರ ಅಥವಾ ಮನಸ್ಸಿಗೆ ನೋವುಂಟು ಆಗಿದ್ದರೆ ಮಾಡಿದ್ದರೆ ನಾನೂ ಅತ್ಯಂತ ವಿನಯದಿಂದ ಕ್ಷಮೆಯಾಚಿಸುತ್ತೇನೆ ಹಾಗೂ ನನ್ನ ಜೀವನದ ಕೊನೆಕ್ಷಣದವರೆಗೂ ಕಾಂಗ್ರೆಸ್ ನ ಪ್ರಾಮಾಣಿಕ ಕಾರ್ಯಕರ್ತನಾಗಿರುತ್ತೇನೆ ಹಾಗೂ ಈ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಅಧ್ಯಕ್ಷರಿಗೆ ಕೃತಜ್ಞನಾಗಿರುತ್ತೇನೆ ಎಂದು ಸಲೀಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp