52 ಸಾವಿರದ ಆನ್‌ಲೈನ್ ಆರ್ಡರ್ ಗೆ ಡೆಲಿವರಿಯಾದದ್ದು 5 ರೂಪಾಯಿಯ ಬಾರ್ ಸೋಪ್…!

Prasthutha|

ನವದೆಹಲಿ; ಆನ್‌ಲೈನ್ ದೈತ್ಯ ಕಂಪನಿಗಳಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಸೈಟ್’ ಗಳಲ್ಲಿ ಕಳೆದ ವಾರ ಬಿಗ್ ಬಿಲಿಯನ್ ಡೇ ಹಾಗೂ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಹೆಸರಿನಲ್ಲಿ ಭರ್ಜರಿ ಆಫರ್’ ಗಳ ಮಾರಾಟ ನಡೆದಿತ್ತು. ಈ ಅವಧಿಯಲ್ಲಿ ಎಲ್ಲಾ ಪ್ರಮುಖ ಬ್ರ್ಯಾಂಡ್’ ಗಳ ಮೊಬೈಲ್ ಫೋನ್’ ಗಳ ಮೂಲ ದರದ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗಿತ್ತು.ಆದರೆ ಇದೇ ಆಫರ್ ನೋಡಿ ಐಫೋನ್ ಆರ್ಡರ್ ಮಾಡಿದ್ದ ಗ್ರಾಹಕನೋರ್ವ ಡೆಲಿವರಿ ಸಮಯದಲ್ಲಿ ಬಾಕ್ಸ್ ಬಿಚ್ಚಿದ ವೇಳೆ ಅದರಲ್ಲಿದ್ದ ವಸ್ತುವನ್ನು ನೋಡಿ ಶಾಕ್ ಆಗಿದ್ದಾನೆ.

- Advertisement -


ಸಿಮ್ರಾನ್ ಪಾಲ್ ಸಿಂಗ್ ಎಂಬಾತ 51,999 ರೂಪಾಯಿ ಪಾವತಿಸಿ ಫ್ಲಿಪ್ ಕಾರ್ಟ್ ‘ನಲ್ಲಿ ಐಫೋನ್-12 ಬುಕ್ ಮಾಡಿದ್ದ. ಕೆಲ ದಿನಗಳ ಬಳಿಕ ಆರ್ಡರ್ ಮಾಡಿದ್ದ ಫೋನ್ ಡೆಲಿವರಿ ಬಂದಿತ್ತು. ಸ್ವಲ್ಪ ಎಚ್ಚರ ವಹಿಸಿದ್ದ ಸಿಮ್ರಾನ್ ಪಾಲ್ ಸಿಂಗ್, ಡೆಲಿವರಿ ವೇಳೆ ಕೇಳುವ OTP ನೀಡಲು ನಿರಾಕರಿಸಿ, ಡೆಲಿವರಿ ಬಾಯ್ ಎದುರಲ್ಲೇ ಬಾಕ್ಸ್ ಓಪನ್ ಮಾಡಿದ್ದಾನೆ. ಜೊತೆಗೆ ಬಾಕ್ಸ್ ಓಪನ್ ಮಾಡುವ ವೀಡಿಯೋ ಕೂಡ ಮಾಡಿದ್ದ. ಡೆಲಿವರಿ ಬಾಯ್ ಎದುರು ಬಾಕ್ಸ್ ಓಪನ್ ಮಾಡಿದಾಗ ಬಾಕ್ಸ್’ ನಲ್ಲಿ 52000 ರುಪಾಯಿ ಮೌಲ್ಯದ ಐಫೋನ್ ಬದಲು 5 ರುಪಾಯಿ ಬೆಲೆಯ ಬಟ್ಟೆ ಒಗೆಯುವ ಎರಡು ಬಾರ್ ಸೋಪ್’ಗಳನ್ನು ಇಡಲಾಗಿತ್ತು.


ಸಿಮ್ರಾನ್ ಸಿಂಗ್ OTP ನೀಡದೇ ಇರುವುದರಿಂದ ದೊಡ್ಡ ನಷ್ಟವೊಂದರಿಂದ ಪಾರಾಗಿದ್ದಾರೆ. ಒಂದು ವೇಳೆ OTP ನೀಡಿದ್ದರೆ ಆರ್ಡರ್ ಮಾಡಿದ್ದ ವಸ್ತುವು ಡೆಲಿವರಿ ಆಗಿದೆ ಎಂದು ನಮೂದಿಸಲಾಗುತ್ತಿತ್ತು.
ಇದಾದ ಬಳಿಕ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ಮೂಲಕ ಘಟನೆ ವಿವರಿಸಿದ ಸಿಮ್ರಾನ್ ಪಾಲ್’ ಬಳಿ ತಮ್ಮಿಂದಾದ ಪ್ರಮಾದವನ್ನು ಕಂಪನಿ ಒಪ್ಪಿಕೊಂಡಿದೆ. ಬಳಿಕ ಬ್ಯಾಂಕ್ ಖಾತೆಯ ಮೂಲಕ ಮೊದಲೇ ಪಾವತಿಸಿದ್ದ ಹಣವನ್ನು ಮರು ಪಾವತಿಸಿದೆ.ಆನ್ಲೈನ್ ಸೈಟ್ ಗಳಲ್ಲಿ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಈ ರೀತಿಯಲ್ಲಿ ಮೋಸವಾಗುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿದ್ದರೂ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಈ ದೈತ್ಯ ಕಂಪೆನಿಗಳು ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ.



Join Whatsapp