ಬಲವಂತದ ಒಕ್ಕಲೆಬ್ಬಿಸುವ ವೇಳೆ ಇಬ್ಬರು ಮುಸ್ಲಿಮರ ಹತ್ಯೆ: ಪೊಲೀಸರ ವಿರುದ್ಧ ಪ್ರಕರಣ ದಾಖಲು

Prasthutha|

ಗುವಾಹಟಿ: ಅಸ್ಸಾಂ ನಲ್ಲಿ ಬಲವಂತದ ಒಕ್ಕಲೆಬ್ಬಿಸುವ ವೇಳೆ ಪೊಲೀಸರು ನಡೆಸಿ ಗುಂಡಿನ ದಾಳಿಯಲ್ಲಿ ಇಬ್ಬರು ಮುಸ್ಲಿಮರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ದರ್ರಾಂಗ್ ಜಿಲ್ಲೆಯ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

ಸೆಪ್ಟೆಂಬರ್ 23 ರಂದು ಸಿಪಝಾರ್ ನಲ್ಲಿ ಬಲವಂತದ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ಮೊಯಿನುಲ್ ಹಕ್ ಮತ್ತು ಶೇಖ್ ಫರೀದ್ ಎಂಬವರ ಕುಟುಂಬದ ಸದಸ್ಯರು ಸಲ್ಲಿಸಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

ಪ್ರತಿಭಟನೆಯ ವೇಳೆಯಲ್ಲಿ ನಡೆದ ಘರ್ಷಣೆಯ ನಂತರ ಪೊಲೀಸರು ಮೊಯಿನುಲ್ ಹಕ್ ಅವರನ್ನು ಗುಂಡು ಹೊಡೆದು ಕೊಂದ ನಂತರ ಛಾಯಾಗ್ರಾಹಕ ಬಿಜೋಯ್ ಬನಿಯಾ ಎಂಬಾತ ಪೊಲೀಸ್ ಉಪ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಉಪ ಐ.ಜಿ ಸೇರಿದಂತೆ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹದ ಮೇಲೆ ಕುಪ್ಪಳಿಸಿ ವಿಕೃತ ಮೆರೆದ ದೃಶ್ಯ ವೈರಲ್ ಆಗಿತ್ತು.

- Advertisement -

ಇನ್ನೊಂದು ಘಟನೆಯಲ್ಲಿ ಫರೀದ್ ಎಂಬ ಬಾಲಕ, ತನ್ನ ಆಧಾರ್ ಕಾರ್ಡ್ ಸಂಗ್ರಹಿಸಲು ಪೋಸ್ಟ್ ಆಫೀಸ್ ಗೆ ತೆರಳಿ ಹಿಂದಿರುಗಿ ಬರುತ್ತಿದ್ದಾಗ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

ಈ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ನ ದರ್ರಾಂಗ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp