ಮಂಗಳೂರು: ತಂದೆಯಿಂದ ಮಗನ ಮೇಲೆ ಫೈರಿಂಗ್ ಪ್ರಕರಣ; ಸುಧೀಂಧ್ರ ಅಂಗಾಂಗ ದಾನ ನಿರ್ಧಾರ ವಾಪಸ್

Prasthutha|

ಮಂಗಳೂರು: ತಂದೆಯಿಂದಲೇ ಮಿಸ್ ಫೈರಿಂಗ್ ನಡೆದು ಆಸ್ಪತ್ರೆ ದಾಖಲಾದ ಪುತ್ರನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದ ಕುಟುಂಬಿಕರು ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

- Advertisement -

ಸಂತ್ರಸ್ತನಿಂದ ಬಳಕೆಗೆ ಅರ್ಹವಾದ ಅಂಗಾಂಗಗಳನ್ನು ಇಂದು ರಾತ್ರಿ 8 ಗಂಟೆ ಒಳಗಾಗಿ ಬೇರ್ಪಡಿಸಿ ಪ್ರತ್ಯೇಕಿಸುವಂತೆ ಕುಟುಂಬಿಕರು ಸೂಚಿಸಿದ್ದರು. ಆದರೆ ಕಡಿಮೆ ಅವಧಿಯಲ್ಲಿ ಅಂಗಾಂಗ ಬೇರ್ಪಡಿಸುವುದು ಅಸಾಧ್ಯ ಎಂದು ವೈದ್ಯಕೀಯ ತಂಡವು ತಿಳಿಸಿತ್ತು. ಇದಾದ ಬಳಿಕ ಕುಟುಂಬಿಕರು ಅಂಗಾಂಗ ದಾನ ಮಾಡದಿರಲು ನಿರ್ಧರಿಸಿದ್ದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ನಿನ್ನೆ ಸಾಯಂಕಾಲ ವೇಳೆ ನಗರದ ಮಾರ್ಗನ್ಸ್ ಗೇಟ್ ಬಳಿ ನಡೆದಿದ್ದ ಫೈರಿಂಗ್ ನಿಂದಾಗಿ ಎಸ್ಎಸ್ಎಲ್ ಸಿ ಬಾಲಕ ಸುಧೀಂಧ್ರ ಪ್ರಭು ತಮ್ಮ ತಂದೆ ರಾಜೇಶ್ ಪ್ರಭು ಹಾರಿಸಿದ ಗುಂಡಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಸಂಬಂಧ ಈಗಾಗಲೇ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



Join Whatsapp