ಏಷ್ಯಾದ ಮೊದಲ ಹೈಬ್ರಿಡ್ ಪ್ಲೈಯಿಂಗ್ ಕಾರು ಆವಿಷ್ಕರಿಸಿದ ಭಾರತೀಯ ಮುಸ್ಲಿಮ್ ಇಂಜಿನಿಯರ್: ಪ್ರಾಧಿಕಾರದಿಂದ ಕಡೆಗಣನೆ

Prasthutha|

ನವದೆಹಲಿ: ಏಷ್ಯಾದ ಮೊದಲ ಹೈಬ್ರೀಡ್ ಪ್ಲೈಯಿಂಗ್ ಕಾರನ್ನು ಆವಿಷ್ಕರಿಸಿದ ಮುಹಮ್ಮದ್ ಫುರ್ಖಾನ್ ಶೋಯೆಬ್ ಎಂಬವರಿಗೆ ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನು ಪರಿಗಣಿಸುವಲ್ಲಿ ಅಸಡ್ಡೆ ತೋರಿದೆ. ಮಾತ್ರವಲ್ಲ ಅವರ ಸಾಧನೆಯನ್ನು ಭಾರತೀಯ ಮಾಧ್ಯಮಗಳೂ ಗುರುತಿಸುವಲ್ಲಿ ವಿಫಲವಾಗಿವೆ.

- Advertisement -

ವಿನತಾ ಏರೋಮೊಬಿಲಿಟಿ ಎಂಬ ಕಂಪೆನಿ ಇತ್ತೀಚೆಗೆ ಏಷ್ಯಾದಲ್ಲೇ ಮೊದಲ ಹೈಬ್ರಿಡ್ ಪ್ಲೈಯಿಂಗ್ ಕಾರನ್ನು ವಿನ್ಯಾಸಗೊಳಿಸಿದೆ. ಇದರಲ್ಲಿ ಭಾರತೀಯ ಇಂಜಿನಿಯರ್ ಮುಹಮ್ಮದ್ ಫುರ್ಖಾನ್ ಶೋಯೆಬ್ ಅವರು ತಂತ್ರಜ್ಞಾನ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಈ ಅಭೂತಪೂರ್ವ ಸಾಧನೆಗೆ ಭಾರತ ಜಗತ್ತಿನ ಎದುರಲ್ಲಿ ಪ್ರಖ್ಯಾತಿ ಹೊಂದಿತ್ತು ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಕಂಪೆನಿಯ ಸಾಧನೆಯನ್ನು ಹೊಗಳಿದ್ದರು.

- Advertisement -

ಪ್ರಸ್ತುತ ಈ ಕಾರು ಹೈಬ್ರಿಡ್ ಕಾರು ಗಂಟೆಗೆ 120 ಕಿ.ಮೀ ವೇಗದಲ್ಲಿ ಓಡಾಟ ನಡೆಸುತ್ತದೆ. ಮಾತ್ರವಲ್ಲ ಅಕ್ಟೋಬರ್ 5 ರಂದು ಲಂಡನ್ ನ ಹೆಲಿಟೆಕ್ ಏಕ್ಸ್ ಪೋ ದಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ.

ಈ ಮಧ್ಯೆ ಉತ್ತರಪ್ರದೇಶ ಮೂಲದ ಮುಹಮ್ಮದ್ ಫುರ್ಖಾನ್ ಅವರನ್ನು ವಿನತಾ ಏರೋಮೊಬಿಲಿಟಿಯಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಿಸಲಾಗಿದ್ದು, ಆದರೆ ಭಾರತದಲ್ಲಿ ಅವರನ್ನು ಕಡೆಗಣಿಸಲಾಗಿದೆ.



Join Whatsapp