ವಾಷಿಂಗ್ಟನ್: ನಿನ್ನೆ ರಾತ್ರಿ 9 ಗಂಟೆಗೆ ಜಗತ್ತಿನಾದ್ಯಂತ ಫೇಸ್ ಬುಕ್ ಸೇವೆ ಹಾಗೂ ಫೇಸ್ ಬುಕ್ ಇಂಕ್ ನ ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಸೇವೆ ಸ್ಥಗಿತಗೊಂಡಿದ್ದ ಅಪ್ಲಿಕೇಷನ್ ಗಳು ಮುಂಜಾನೆ 3 ಗಂಟೆಯ ವೇಳೆಗೆ ಕಾರ್ಯನಿರ್ವಹಿಸಲು ಪ್ರಾರಂಭವಾದವು.
ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಫೇಸ್ ಬುಕ್, ರೂಟರ್ ಗಳ ಸಂರಚನೆಯಲ್ಲಿನ ದೋಷಪೂರಿತ ಬದಲಾವಣೆಯಿಂದಾಗಿಯೇ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿದ್ದವು ಎಂದು ಹೇಳಿದೆ.
ರೂಟರ್ ಗಳು ಡೇಟಾ ಸೆಂಟರ್ ಗಳ ನಡುವೆ ನೆಟ್ ವರ್ಕ್ ಟ್ರಾಫಿಕ್ ನಿಯಂತ್ರಿಸುವ ಕೆಲಸ ಮಾಡುತ್ತವೆ. ಈ ರೂಟರ್ ಗಳಲ್ಲಿನ ಸಂರಚನೆಯಲ್ಲಿ ಬದಲಾವಣೆಯಾಗಿರುವುದೇ ಸಮಸ್ಯೆಗೆ ಕಾರಣ ಎಂದು ಫೇಸ್ ಬುಕ್ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ನಮ್ಮ ಸೇವೆಗಳು ಪುನಃ ಆರಂಭಿಸಿದ್ದೇವೆ. ಸಂಪೂರ್ಣವಾಗಿ ಸೇವೆಗಳನ್ನು ನೀಡುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಫೇಸ್ಬುಕ್ ಹೇಳಿದೆ