ಛತ್ತೀಸ್ ಗಡ: ಕಾಂಗ್ರೆಸ್ ಆಡಳಿತವಿರುವ ಛತ್ತೀಸ್ ಗಡದಲ್ಲಿ ಬಡ ಮತ್ತು ಬುಡಕಟ್ಟು ಹಿಂದುಗಳ ಮತಾಂತರದ ಆರೋಪದಲ್ಲಿ ಇಲ್ಲಿನ ಕ್ರೈಸ್ತ ಸಮುದಾಯವನ್ನು ಹಿಂದುತ್ವ ಗುಂಪು ಗುರಿಯಾಗಿಸುತ್ತಿದೆ ಎಂದು ಬ್ರಿಟಿಷ್ ದಿನಪತ್ರಿಕೆ “ದಿ ಗಾರ್ಡಿಯನ್” ಆರೋಪಿಸಿದೆ.
ಮಾತ್ರವಲ್ಲ ಬಲವಂತದ ಮತಾಂತದ ಆರೋಪದ ಹಿನ್ನೆಲೆಯಲ್ಲಿ ಭಾರತದ ಕ್ರೈಸ್ತರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹನ್ನಾ ಎಲ್ಲಿಸ್ ಪೀಟರ್ಸನ್ ಶೀರ್ಷಿಕೆಯ ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.
ಛತ್ತೀಸ್ ಗಡದ ಬಡ ಹಿಂದೂ ಮತ್ತು ಬುಡಕಟ್ಟು ಜನಾಂಗವನ್ನು ಕ್ರಿಶ್ಚಿಯನ್ ಪಾದ್ರಿಗಳು ಹಣದ ಆಮಿಷ, ಉಚಿತ ವೈದ್ಯಕೀಯ ನೆರವು ಮತ್ತು ವಿದೇಶಿ ಪ್ರವಾಸದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಅವರ ಮೇಲೆ ದಾಳಿ ನಡೆಸಲಾಗುತ್ತಿರುವುದು ದುರಂತ ಎಂದು ಗಾರ್ಡಿಯನ್ ಬಣ್ಣಿಸಿದೆ.