ಗಾಂಧಿ ಜಯಂತಿ ಪ್ರಯುಕ್ತ ಮಡಿಕೇರಿ ಮತ್ತು ನಾಪೋಕ್ಲು ವಿನಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತರಿಂದ ಶ್ರಮದಾನ

Prasthutha|

ನಾಪೋಕ್ಲು : ಸ್ಥಳೀಯ ಎಸ್ ಡಿಪಿಐ ಕಾರ್ಯಕರ್ತರಿಂದ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿಯವರ 73ನೇ ಜನ್ಮದಿನದ ಅಂಗವಾಗಿ ಶ್ರಮದಾನ ಮಾಡುವ ಮೂಲಕ ಆಚರಿಸಿದರು.ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ವಠಾರದಲ್ಲಿ ತುಂಬಿಕೊಂಡಿದ್ದ ಗಿಡ, ಗಂಟಿ ಕುರುಚಲು ಗಳನ್ನು ಸ್ವಚ್ಛಗೊಳಿಸುವ ಮೂಲಕ ಅರ್ಥಪೂರ್ಣ ವಾಗಿ ಆಚರಿಸಿದರು.

- Advertisement -

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತರಾದ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಕೆ.ವೈ, ಯಾಕೂಬ್ ಕೊಳಕೇರಿ, ಆಸಿಫ್ ಕೊಟ್ಟಮುಡಿ, ಜಲಾಲ್ ಕೊಳಕೇರಿ, ಶಫೀಕ್ ಕುಂಜಿಲ, ಆಬಿದ್ ಕೊಳಕೇರಿ, ಅಶ್ರಫ್ ಕುಂಜಿಲ, ಗಫೂರ್ ಕೊಟ್ಟಮುಡಿ, ಮೂಸಾನ್ ಕೊಟ್ಟಮುಡಿ,ಮತ್ತಿತರರು ಪಾಲ್ಗೊಂಡಿದ್ದರು.

ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಡಿಕೇರಿ ನಗರ ಸಮಿತಿ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತೆ ಅಭಿಯಾನ ದಲ್ಲಿ ಪಕ್ಷದ ಕಾರ್ಯಕರ್ತರಿಂದ ಸ್ವಚ್ಚತೆಯನ್ನು ಅಭಿಯಾನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ನಗರಾಧ್ಯಕ್ಷ ನೂರುದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಮುಸ್ತಫಾ ಹಾಗೂ ನಗರಸಭೆ ಸದಸ್ಯರು ಅಮೀನ್ ಮೊಹಿಸಿನ್ ಮನ್ಸೂರ್ ಬಶೀರ್ ನಿಮಾ ಮೇರಿ ವೇಗಸ್ ಉಪಸ್ಥಿತರಿದ್ದರು ಇವರ ಮುಂದಾಳತ್ವದಲ್ಲಿ ನೂರು ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು



Join Whatsapp