ಜಂತರ್ ಮಂತರ್ ನಲ್ಲಿ ಹೋರಾಟನಿರತ ರೈತರ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ ಸುಪ್ರೀಮ್ ಕೋರ್ಟ್

Prasthutha|

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ದೆಹಲಿಯ ಜಂತರ್ ಮಂತರ್ ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ಕೋರಿ ಸುಪ್ರೀಮ್ ಕದ ತಟ್ಟಿದ್ದರು. ಆದರೆ ಉಚ್ಛ ನ್ಯಾಯಾಲಯ ಇದಕ್ಕೆ ಅನುಮತಿ ನಿರಾಕರಿಸಿದೆ. ಮಾತ್ರವಲ್ಲ ನೀವು ಪ್ರತಿಭಟನೆ ನಿಲ್ಲಿಸುವುದು ಸೂಕ್ತ ಎಂದು ಹೇಳಿದೆ. ಹೆದ್ದಾರಿಗಳನ್ನು ನಿರ್ಬಂಧಿಸುವ ಮೂಲಕ ನೀವು ನಗರವನ್ನು ಉಸಿರುಗಟ್ಟುವ ಪರಿಸ್ಥಿತಿಗೆ ತಳ್ಳಿದ್ದೀರಿ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ.

- Advertisement -

ದೆಹಲಿಯ ಹೃದಯ ಭಾಗ ಜಂತರ್ ಮಂತರ್ ನಲ್ಲಿ ಸತ್ಯಾಗ್ರಹ ನಡೆಸಲು ರೈತ ಸಂಘಟನೆಯಾದ ಕಿಸಾನ್ ಮಹಾ ಪಂಚಾಯತ್ ವತಿಯಿಂದ ಸುಪ್ರೀಮ್ ಕೋರ್ಟ್ ನಿಂದ ಅನುಮತಿ ಕೋರಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಮ್ ಕೋರ್ಟ್ ರೈತರ ಪ್ರತಿಭಟನೆಯಿಂದ ಇಡೀ ನಗರದಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಮತ್ತು ನಗರದ ಜನರು ಸಂಕಷ್ಟ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಪ್ರತಿಭಟನೆ ನಿಲ್ಲಿಸುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.

Join Whatsapp