ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜತೆ ಇಸ್ರೇಲ್ ಸಹಜ ಸ್ಥಿತಿ ಸ್ಥಾಪನೆಯ ಒಪ್ಪಂದಕ್ಕೆ ಇಸ್ರೇಲ್ ಸಂಸತ್ತು (ಕೆನೆಸೆಟ್) ಒಪ್ಪಿಗೆ ಸೂಚಿಸಿದೆ. ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಬೆಂಜಮಿನ್ ನೇತನ್ಯಾಹು, “ ಈ ಸಹಜ ಸ್ಥಿತಿ ಒಪ್ಪಂದವು ಯಾವುದೇ ಗುಪ್ತ ಕಾರ್ಯಸೂಚಿ ಅಥವಾ ಕಲಂಗಳನ್ನು ಹೊಂದಿಲ್ಲ ಎನ್ನುವುದರ ಕುರಿತಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ” ಇಸ್ರೇಲ್ ಸಮ್ಸತ್ ಸದಸ್ಯರಲ್ಲಿ ಹೇಳಿದ್ದರು.
ನೆಸೆಟ್ ನ 80 ಸದಸ್ಯರು ಒಪ್ಪಂದದ ಪರವಾಗಿ ಮತ ಚಲಾಯಿಸಿದರೆ 13 ಮಂದಿ ಇದರ ವಿರುದ್ಧ ಮತ ಚಲಾಯಿಸಿದರು. ಒಪ್ಪಂದವನ್ನು ವಿರೋಧಿಸಿ ಮತ ಹಾಕಿದವರೆಲ್ಲರೂ ಅರಬ್ ಇಸ್ರೇಲಿ ಸದಸ್ಯರಾಗಿದ್ದಾರೆ
ಕಳೆದ ಆಗಸ್ಟ್ ನಲ್ಲಿ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಯುಎಇ ಸಂಬಂಧಗಳನ್ನು ಸಹಜಸ್ಥಿತಿಗೆ ತರಲು ಒಪ್ಪಂದ ಮಾಡಿಕೊಂಡಿದ್ದವು. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ಕೊಲ್ಲಿ ರಾಷ್ಟ್ರ ಬಹ್ರೇನ್ ಕೂಡಾ ಇದೇ ರೀತಿಯ ಒಪ್ಪಂದಕ್ಕೆ ಇಸ್ರೇಲಿನೊಂದಿಗೆ ಸಹಿ ಹಾಕಿತ್ತು. ಇದೀಗ ಸುಡಾನ್ ಜೊತೆಗೆ ಇಸ್ರೇಲಿನ ಸಹಜ ಸ್ಥಿತಿ ಸ್ಥಾಪನೆಗಾಗಿ ಅಮೆರಿಕಾ ಮಧ್ಯಸ್ಥಿಕೆಯ ವಹಿಸುತ್ತಿದೆ.
1948ರಿಂದ ಅರಬ್ ಜಗತ್ತು ಮತ್ತು ಇಸ್ರೇಲ್ ನಡುವೆ ಭಿನ್ನಾಭಿಪ್ರಾಯಗಳು ಅಸ್ತಿತ್ವದಲ್ಲಿದೆ. ಯಹೂದಿ ರಾಜ್ಯದ ಬಲವಂತದ ಸೃಷ್ಟಿಗಾಗಿ ಫೆಲೆಸ್ತೀನಿಯರ ಮೇಲೆ ನಡೆಸಿದ ಹಿಂಸಾಚಾರಗಳನ್ನು ಅರಬ್ ಜಗತ್ತಿನ ಅನೇಕರು ಖಂಡಿಸಿದ್ದಾರೆ. 1981ರಲ್ಲಿ ಇಸ್ರೇಲ್ ಜೊತೆಗಿನ ತನ್ನ ಸಂಬಂಧವನ್ನು ಸಹಜ ಸ್ಥಿತಿಗೆ ಮರಳಿದ ಮೊದಲ ದೇಶ ಈಜಿಪ್ಟ್ ಆಗಿತ್ತು. ಇದು ಈಜಿಪ್ಟ್ ನೊಳಗಡೆ ಮತ್ತು ಅರಬ್ ಜಗತ್ತಿನಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.