ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ದಾಳಿಯ ವಿರುದ್ಧ ಸಿಡಿದೆದ್ದ ಟ್ವಿಟ್ಟರಿಗರು !

Prasthutha|

►ಟ್ವಿಟ್ಟರಿನಲ್ಲಿ #CommissionerBreakSilence  #StudentsNotSafeInMangalore ಟ್ರೆಂಡಿಂಗ್ !

- Advertisement -

ಕಳೆದ ಆದಿತ್ಯವಾರ ಮಲ್ಪೆ ಬೀಚಿಗೆ ವಿಹಾರಕ್ಕೆಂದು ತೆರಳಿದ್ದ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು  ಮಂಗಳೂರಿನ ಎನ್ ಐ ಟಿ ಕೆ ಕಾಲೇಜು ಬಳಿ ಬಜರಂಗದಳದ ಗೂಂಡಾಗಳು ತಡೆದು ಹಲ್ಲೆ ನಡೆಸಿದ್ದರು.  ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮತ್ತು ಆರೋಪಿಗಳ ವಿರುದ್ಧ ಪೊಲೀಸರ ಮೃದು ಧೋರಣೆಯನ್ನು ವಿರೋಧಿಸಿ ಇಂದು ಟ್ವಿಟ್ಟರಿಗರು #CommissionerBreakSilence  #StudentsNotSafeInMangalore ಎಂಬ ಹ್ಯಾಶ್ ಟ್ಯಾಗಿನಲ್ಲಿ ಅಭಿಯಾನವನ್ನು ಕೈಗೊಂಡಿದ್ದರು. ಈ ಅಭಿಯಾನ ಕರ್ನಾಟಕ ರಾಜ್ಯದಲ್ಲಿ ಮೊದಲೆರಡು ಸ್ಥಾನ ಪಡೆದು ನೆಟ್ಟಿಗರ ಗಮನ ಸೆಳೆದಿದೆ. ಹಲವಾರು ಟ್ವಿಟ್ಟರ್ ಖಾತೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಬಜರಂಗದಳದ ಗೂಂಡಾಗಿರಿ ಮತ್ತು ಪೊಲೀಸರ ಮೃದು ಧೋರಣೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಮಂಗಳೂರು : ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರ ದಾಳಿ

- Advertisement -

ವಾರಾಂತ್ಯದ ವಿಹಾರಕ್ಕೆಂದು ಮಲ್ಪೆಗೆ ತೆರಳಿದ್ದ ವಿದ್ಯಾರ್ಥಿಗಳನ್ನು ಸುರತ್ಕಲ್ ಬಳಿ ತಡೆದು ಹಲ್ಲೆ ನಡೆಸಲಾಗಿತ್ತು. ಈ ಘಟನೆಯ ವೇಳೆ ಅದೇ ಹಾದಿಯಾಗಿ ಸಾಗುತ್ತಿದ್ದ ಪೊಲೀಸ್ ಅಧಿಕಾರಿಯಾಗಿರುವ ಷರೀಫ್ ಎಂಬವರು ಕೂಡಾ ಸ್ಥಳದಲ್ಲಿ ಹಾಜರಿದ್ದರೂ, ಅವರ ಮನವಿಯನ್ನೂ ಗಣನೆಗೆ ತೆಗೆದುಕೊಳ್ಳದೆ ದಾಳಿಕೋರರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು.  ಸೋಮವಾರ ಸಂಜೆಯ ಬಳಿಕ ಅದರ ವೀಡಿಯೋ ವೈರಲ್ ಆಗಿದ್ದು, ತಡರಾತ್ರಿ ಸುರತ್ಕಲ್ ಪೊಲೀಸರು ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದರು. ಅವರ ಮೇಲೆ ಲಘು ಸೆಕ್ಷನ್ ಗಳನ್ನು ಹಾಕಿದ್ದು, ಆರೋಪಿಗಳು ಸುಲಭವಾಗಿ  ಠಾಣೆಯಲ್ಲೇ ಜಾಮೀನು ಪಡೆದು ಬಿಡುಗಡೆಗೊಳ್ಳುವಂತಾಗಿತ್ತು. ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಟ್ವಿಟ್ಟರಿಗರು ಕೂಡಾ ಅಭಿಯಾನ ಕೈಗೊಂಡಿದ್ದು, ಘಟನೆಯ ವಿರುದ್ಧ ಆಕ್ರೋಶ ಹೆಚ್ಚಾಗತೊಡಗಿದೆ.

ಘಟನೆಯ ವೀಡಿಯೋ ವೀಕ್ಷಿಸಿ :

Join Whatsapp