ಪಂಜಾಬ್ ಕಾಂಗ್ರೆಸ್ ಗೆ ಮತ್ತೊಂದು ಆಘಾತ । ಸಿಧು ಬೆನ್ನಲ್ಲೇ ಸಚಿವೆ ರಝಿಯಾ ಸುಲ್ತಾನ ರಾಜೀನಾಮೆ

Prasthutha|

ಚಂಡೀಗಢ: ಪಂಜಾಬ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಎರಡು ದಿನಗಳ ಅಂತರದಲ್ಲಿ ಮಲೆರ್ಕೋಟ್ಲಾ ಶಾಸಕಿ ರಝಿಯಾ ಸುಲ್ತಾನಾ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಂಜಾಬ್ ಕಾಂಗ್ರೆಸ್ ಗೆ ಮತ್ತೊಂದು ಆಘಾತ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ ಬೆನ್ನಲ್ಲೆ ಅವರನ್ನು ಬೆಂಬಲಿಸಿ ಸಚಿವೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

- Advertisement -

ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಝಿಯಾ ಸುಲ್ತಾನ, ಸಿಧು ತತ್ವ ಆಧರಿತ ವ್ಯಕ್ತಿ, ಅವರು ಪಂಜಾಬ್ ಮತ್ತು ಪಂಜಾಬ್ ಆದರ್ಶಗಳಿಗೆ ಹೋರಾಟ ನಡೆಸುವವರು. ಈ ನಿಟ್ಟಿನಲ್ಲಿ ಅವರನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದೇನೆ. ಮಾತ್ರವಲ್ಲ ಪಂಜಾಬ್ ನ ಹಿತದೃಷ್ಟಿಯಿಂದ ಪಕ್ಷಕ್ಕಾಗಿಯೇ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಪ್ರಸಕ್ತ ಸುಲ್ತಾನ ಅವರ ರಾಜೀನಾಮೆಯಿಂದ ಪಂಜಾಬ್ ಮತ್ತೆ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ತುರ್ತು ಸಚಿವ ಸಂಪುಟ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Join Whatsapp