ಭೋಪಾಲ್: ಸಣ್ಣ ಮೊತ್ತದ ಲಂಚ ಕೊಡಬಹುದು, ಅದಕ್ಕಿಂತ ಹೆಚ್ಚು ಕೇಳುವುದು ತಪ್ಪು ಎಂದು ಮಧ್ಯ ಪ್ರದೇಶದ ಬಿಎಸ್ ಪಿ ಶಾಸಕಿಯೊಬ್ಬರು ಹೇಳಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿ ಬಟಾ ಬಯಲಿಗೆ ಬಂದಿದೆ.
ಶಾಸಕಿ ರಾಂಬಾಯಿ ಸಿಂಗ್ ಅವರು ದಮೋಹ್ ಜಿಲ್ಲೆಯ ಸಭೆಯೊಂದಕ್ಕೆ ಬಂದಿದ್ದರು. ಆಗ ಹಲವರು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಲಂಚ ಕೇಳುತ್ತಿದ್ದಾರೆ ಎಂದು ದೂರಿದರು. ಎಷ್ಟು ಕೊಟ್ಟಿರಿ ಎಂದು ಕೇಳಿದ್ದಕ್ಕೆ 5ರಿಂದ 10 ಸಾವಿರ ರೂಪಾಯಿ ಎಂದು ಅವರು ಹೇಳಿದರು. ಅದಕ್ಕೆ ಅವರು, ಸಣ್ಣ ಲಂಚ ಒಪ್ಪಬಹುದು. ಅದಕ್ಕಿಂತ ಹೆಚ್ಚು ಕೊಡುವುದು ತಪ್ಪು ಎಂದರು ಈ ಬಿಎಸ್ ಪಿ ಜನ ಪ್ರತಿನಿಧಿ.