ಮುಂಬೈ: ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಸೋಂಕಿನ ಪ್ರಮಾಣ ಕಡಿಮೆ ಎಂದು ಬೃಹನ್ಮುಂಬೈ ಕಾರ್ಪೋರೇಷನ್ (ಬಿಎಂಸಿ) ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಫೆಬ್ರವರಿ 1 ರಿಂದ ಸೆಪ್ಟೆಂಬರ್ ವರೆಗೆ ಒಂದೇ ಡೋಸ್ ಲಸಿಕೆ ಹಾಕಿದ 14,767 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಎರಡು ಡೋಸ್ ಲಸಿಕೆ ಹಾಕಿಸಿಕೊಂಡ 8,323 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಲಸಿಕೆ ಪಡೆದವರಲ್ಲಿ ಕೇವಲ 5.4 ಶೇಕಡಾ ಮಂದಿಗೆ ಮಾತ್ರ ಸೋಂಕು ತಗುಲಿದೆ. ಒಂದು ಡೋಸ್ ಪಡೆದವರಲ್ಲಿ 3.51 ಶೇಕಡಾ ಮತ್ತು ಎರಡು ಡೋಸ್ ಪಡೆದವರಲ್ಲಿ 1.98 ಶೇಕಡಾ ಜನರು ಸೋಂಕಿಗೆ ಒಳಗಾಗಿದ್ದಾರೆ.
ಲಸಿಕೆ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸಲು ಮಂಗಳವಾರ ಸಭೆ ಕರೆಯಲಾಗಿದೆ. ಪ್ರತಿಯೊಬ್ಬರೂ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಲು ಕಾರ್ಪೊರೇಶನ್ ಪ್ರಯತ್ನಿಸುತ್ತಿದೆ.