ಆರೆಸ್ಸೆಸ್ – ತಾಲಿಬಾನ್ ಹೋಲಿಕೆ । ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಗೆ ಕೋರ್ಟ್ ನೋಟಿಸ್

Prasthutha|

ಥಾಣೆ: ಆರೆಸ್ಸೆಸ್ ಅನ್ನು ತಾಲಿಬಾನ್ ಜೊತೆ ಹೋಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಗೆ ಥಾಣೆ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿ ಆದೇಶ ನೀಡಿದೆ.

- Advertisement -

ಆರ್.ಎಸ್.ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಅವರು ಅಖ್ತರ್ ವಿರುದ್ಧ ಹೆಚ್ಚುವರಿ ಮುಖ್ಯ ಮಾಜಿಸ್ಟ್ರೇಟ್ ಮತ್ತು ಜಂಟಿ ಸಿವಿಲ್ ನ್ಯಾಯಾಲಯದಲ್ಲಿ 1 ಲಕ್ಷದ ಮೊತ್ತದ ಮಾನನಷ್ಟ ಪರಿಹಾರ ಮೊಕದ್ದಮೆಯನ್ನು ದಾಖಲಿಸಿದ್ದರು. ಈ ನಿಟ್ಟಿನಲ್ಲಿ ನವೆಂಬರ್ 12 ರಂದು ಶೋಕಾಸ್ ನೋಟಿಸ್ ಗೆ ಉತ್ತರಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಜಾವೇದ್ ಅಖ್ತರ್ ಅವರು ಸುದ್ದಿ ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ತಾಲಿಬಾನ್ ಬಂಡುಕೋರರು ಇಸ್ಲಾಮಿಕ್ ರಾಷ್ಟ್ರವನ್ನು ಬಯಸಿದರೆ, ಬಲಪಂಥೀಯ ಸಂಘಟನೆ ವರ್ಣಾಶ್ರಮ ವ್ಯವಸ್ಥೆ ಅಡಿಯಲ್ಲಿ ಹಿಂದುತ್ವ ರಾಷ್ಟ್ರದ ಪರಿಕಲ್ಪನೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಇಬ್ಬರ ನಡುವೆ ಸಾಮ್ಯತೆಯಿದೆ ಎಂದು ಸಾಂದರ್ಭಿಕವಾಗಿ ಹೇಳಿದ್ದರು.

- Advertisement -

ಸಾಮಾನ್ಯ ಜನರ ದೃಷ್ಟಿಯಲ್ಲಿ ಆರೆಸ್ಸೆಸ್ ನ ಇಮೇಜ್ ಅನ್ನು ಹಾಳುಗೆಡಹುವ ಗುರಿಯೊಂದಿಗೆ ಈ ಹೇಳಿಕೆಯನ್ನು ನೀಡಲಾಗಿದೆ ಎಂದು ದೂರುದಾರ ಚಂಪನೇಕರ್ ತನ್ನ ದಾವೆಯಲ್ಲಿ ದೂರಿದ್ದರು.

ದೂರುದಾರರ ಪರವಾಗಿ ವಕೀಲರಾದ ಆದಿತ್ಯ ಮಿಶ್ರಾ, ಸಂಘಟನೆಯ ವಿರುದ್ಧ ಫಿರ್ಯಾದಿ ಆಧಾರರಹಿತ, ಸುಳ್ಳಾರೋಪ ಹೊರಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿದರು. ಈ ನಿಟ್ಟಿನಲ್ಲಿ ಪರಿಹಾರವನ್ನು ಒದಗಿಸಿಕೊಡಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.

Join Whatsapp