ದೇವಾಲಯದ ಮುಂದೆ ನೃತ್ಯ ವೈರಲ್| ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಪ್ರಕರಣ ದಾಖಲಿಸಿದ ಬಜರಂಗದಳ!

Prasthutha|

ಭೋಪಾಲ್: ದೇವಾಲಯದ ಗೇಟ್ ಮುಂಭಾಗದಲ್ಲಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಾ ನರ್ತಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮಹಿಳೆಯ ವಿರುದ್ಧ ಮಧ್ಯಪ್ರದೇಶದ ಚತಾರ್ ಪುರ್ ನಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ವಿಡಿಯೋ ವೈರಲ್ ಆಗುತ್ತಿದ್ದಂತೆ ಭಜರಂಗದಳದ ನಾಯಕ ಶಿವ್ ಹಾರೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಆರತಿ ಸಾಹು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಂತೈ ತಾರಿಯಾ ದೇವಾಲಯದ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿರುವುದು ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರತಿ ಸಾಹು 25 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿರುವ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಾದಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊವನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚತಾರ್‌ಪುರ್ ಎಸ್‌ಡಿಒಪಿ ಶಶಾಂಕ್ ಜೈನ್ ಹೇಳಿದ್ದಾರೆ.

- Advertisement -

ಈ ಘಟನೆ ವಿವಾದವಾಗುತ್ತಿದ್ದಂತೆಯೇ ಸಾಹು ಕ್ಷಮೆ ಕೇಳಿದ್ದರು. ತಾನು ಚಿಕ್ಕವಳಿದ್ದಾಗಿನಿಂದಲೂ ದೇವಸ್ಥಾನಕ್ಕೆ ಹೋಗುತ್ತಿದ್ದೆ ಮತ್ತು ಯಾರನ್ನೂ ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಆಕೆ ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾಳೆ.

‘ಕಾಕ್ಟೇಲ್’ ಚಿತ್ರದ ‘ದಾಯೆ ಲಗೇ ಕಭಿ ಬಾಯೇ ಲಗೇ’ ಮತ್ತು ವೆಲ್ ಕಮ್ ಟು ಕರಾಚಿ’ ಚಿತ್ರದ ‘ಮೇರೆ ಶಾಮ್ ಅವದ್ ಸೇ ಆಯಿ ಹೈ’ ಎಂಬ ಬಾಲಿಹುಡ್ ಹಾಡಿಗೆ ದೇವಸ್ಥಾನದ ಗೇಟ್ ಮುಂದೆ ಆರತಿ ಸಾಹು ಹೆಜ್ಜೆ ಹಾಕಿದ್ದರು.



Join Whatsapp