“ಈ ಸಲ ಕಪ್ ನಮ್ದೇ” ಎಂದು ಬೀಗಿದ RCB ಅಭಿಮಾನಿಗಳು

Prasthutha|

ಬೆಂಗಳೂರು: ಸತತ ಎರಡು ಸೋಲುಗಳ ಆಘಾತ ಅನುಭವಿಸಿದ್ದ ಆರ್‌ ಸಿಬಿ ತಂಡ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವು ಸಾಧಿಸಿ, ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಗೆಲುವು ಪಡೆದಿದೆ.

- Advertisement -

‘ಸೋತರು ಗೆದ್ದರು ನಾವ್ ಆರ್‌ ಸಿಬಿ ಫ್ಯಾನ್ಸ್ ‘ ಅಂತ ಹೇಳಿಕೊಳ್ಳುವ ಪಕ್ಕ ಅಭಿಮಾನಿಗಳ ಬಳಗ ಹೊಂದಿರುವ ಆರ್‌ ಸಿಬಿ ತಂಡದ ಗೆಲುವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದಾರೆ.

‘ಸೋತಾಗ ಎರಡು ಸ್ಟೇಟಸ್ ಹಾಕೋ ನಾವು ಗೆದ್ದಾಗ ನಾಲ್ಕು ಸ್ಟೇಟಸ್ ಹಾಕಿ ಸಂಭ್ರಮಿಸುತ್ತೇವೆ’ ಎನ್ನುವ ವಿಡಿಯೋ ತುಣುಕುಗಳು ಈಗಾಗಲೇ ಎಲ್ಲೆಡೆ ಸದ್ದು ಮಾಡುತ್ತಿದೆ. ಜೊತೆಗೆ ಈ ಸಲ ಕಪ್ ನಮ್ದೇ ಎನ್ನುವ ಉದ್ಗರ್ಷ ಇನ್ನೂ ಹೆಚ್ಚಾಗಿದೆ. ಇದೆ ರೀತಿ ಅನೇಕರು ನಾನಾ ಅಭಿಪ್ರಾಯಗಳನ್ನು ಕೂ ವಿನಲ್ಲಿ ಹಂಚಿಕೊಂಡಿದ್ದಾರೆ.

- Advertisement -

‘ಹಂಗೂ ಹಿಂಗೂ rcb ಗೆದ್ದು ಬೀಗಿದೆ. ಹೀಗೇ ಮುಂದುವರಿಯಲಿ ಗೆಲುವಿನ ಓಟ’ ಎಂದು ಮೀನಾಕ್ಷಿ ಆನಂದ ಹೊಸಮನೆ ಸಂಭ್ರಮಿಸಿದ್ದಾರೆ.

‘ನಾ ಮೊದ್ಲೇ ಹೇಳಿದ್ದೆ! ಈ ಸಲ ಕಪ್ ನಮ್ದೆ’ ಎಂದು ಒಂದು ಗೆಲುವಿಗಾಗಿ ಕಾಯುತ್ತಿದ್ದ ಸುದರ್ಶನ್ ಹಾರ್ನಳ್ಳಿ ಕೂ ಮಾಡಿದ್ದಾರೆ.

‘ಸತತ ಎರಡು ಸೋಲುಗಳಿಂದ ನಿರಾಶೆಗೊಳಿಸಿದ್ದ RCB ಮತ್ತೆ ತನ್ನ ಮೊದಲಿನ ಲಯ ಕಂಡುಕೊಂಡು, ಮುಂಬೈ ಇಂಡಿಯನ್ಸ್ ವಿರುದ್ಧ 54 ರನ್ ಗಳ ಬರ್ಜರಿ ಜಯದೊಂದಿಗೆ ಫೈನಲ್ ಪ್ರವೇಶದ ಹಾದಿ ಸುಗಮಗೊಳಿಸಿಕೊಂಡಿದೆ .ಇದೇ ರೀತಿ ಆಡುತ್ತಾ ಹೋದರೆ ಈ ಸಲ ಕಪ್ ನಮ್ದೆ’ ಎಂದಿದ್ದಾರೆ ಬನಶಂಕರ ಶಂಕರನೋರ್.

‘ಬೆಂಗಳೂರು ಅಬ್ಬರ…. ಮುಂಬೈ ಛಿದ್ರಛಿದ್ರ’ ಎಂದು ಶಿಕ್ಷಕಿ ರಾಜನಂದಿನಿ ಗೆಲುವಿನ ಖುಷಿಯನ್ನು ಕೂ ವಿನಲ್ಲಿ ಹಂಚಿಕೊಂಡಿದ್ದಾರೆ. ‘RCB ಗೆ ಕಾಣದ #Cup ಗೆ ಹಂಬಲಿಸುತಿದೆ ಮನ…… ಆದರು ಈ ಸಲ ಕಪ್ ನಮ್ಮದೇ…..’ ಎಂದು ವಿಜಯಕುಮಾರ್ ಕೂ ಮಾಡಿದ್ದಾರೆ.



Join Whatsapp