ವಿದ್ಯಾರ್ಥಿ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆಯತ್ನ: ಆರೋಪಿಯನ್ನು ತಕ್ಷಣ ಬಂಧಿಸುವಂತೆ ಎಸ್ ಡಿಪಿಐ ಒತ್ತಾಯ

Prasthutha|

ಮಂಜೇಶ್ವರ: ಎಣ್ಮಕಜೆಗೆ ಸಮೀಪದ ಚವರ್ಕಾಡ್ ಎಂಬಲ್ಲಿಯ ಎಂಟನೇ ತರಗತಿಯಲ್ಲಿ ಓದುತ್ತಿರುವ ಮುಸ್ತಫಾ ಎಂಬ ವಿದ್ಯಾರ್ಥಿ ಮತ್ತು ಆತನ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈಯ್ಯಲು ಸ್ಥಳೀಯ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಗೂಂಡಾ ಕ್ರಿಮಿನಲ್ ಹಿನ್ನೆಲೆಯ ಗಿರೀಶ್ ಪಾಟಾಳಿ ಎಂಬಾತ ಪ್ರಯತ್ನಿಸಿದ್ದು, ಆತನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ಒತ್ತಾಯಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉತ್ತರ ಪ್ರದೇಶ ಮಾದರಿಯಲ್ಲಿ ಅಮಾಯಕರನ್ನು ಹುಡುಕಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಇಲ್ಲಿನ ಕಾನೂನಿಗೆ ಸವಾಲೊಡ್ಡಿರುವುದಲ್ಲದೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸೌಹಾರ್ದಕ್ಕೆ ಹೆಸರುವಾಸಿಯಾದ ಮಂಜೇಶ್ಚರದ ಮಣ್ಣನ್ನು ಕೋಮುಗಲಭೆಗೆ ಸಿದ್ಧಪಡಿಸುವುದರ ಸೂಚನೆ ಕೂಡ ಆಗಿದೆ. ಹಲ್ಲೆ ಮಾಡಿರುವ ಗಿರೀಶ್ ಪಾಟಾಳಿ ಎಂಬ ಕ್ರಿಮಿನಲ್ ಗೂಂಡಾನನ್ನು ಬಂಧಿಸಿ ಇವನ ಈ ದುಷ್ಕೃತ್ಯಕ್ಕೆ ಪ್ರೇರಿತವಾಗಿರುವ ಈ ಘಟನೆಯ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮುಂದೆ ತಂದು ಶಿಕ್ಷಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp