ತಬೂಕ್ : ಕೇರಳ ರಾಜ್ಯದ ತ್ರಿಶೂರ್ ನಿವಾಸಿಯಾದ ಮುಹಮ್ಮದ್ ರಾಫಿ ಎಂಬವರು ತನ್ನ ಪ್ರಾಯೋಜಕನ ಕುತಂತ್ರದಿಂದ ಸುಳ್ಳು ಕೇಸು ದಾಖಲಿಸಲ್ಪಟ್ಟು ಊರಿಗೆ ಹೋಗಲು ಸಾಧ್ಯವಾಗದೆ ಕಳೆದ 2-3 ವರುಷಗಳಿಂದ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದುದನ್ನು ಅರಿತ ಇಂಡಿಯನ್ ಸೋಶಿಯಲ್ ಫೋರಮ್ ತಬೂಕ್ ಪದಾಧಿಕಾರಿಗಳು ರಾಫಿ ಅವರನ್ನು ಸ್ವದೇಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಹಮ್ಮದ್ ರಾಫಿ ಅವರ ಕೇಸಿನ ಜವಾಬ್ದಾರಿಯನ್ನು ಅಬ್ದುಲ್ ಲತೀಫ್ ಉಪ್ಪಿನಂಗಡಿ ಇವರಿಗೆ ವಹಿಸಿ ಕೊಡಲಾಯಿತು. ಈ ಬಗ್ಗೆ ಕಾರ್ಯಪ್ರವೃತ್ತರಾದ ಅಬ್ದುಲ್ ಲತೀಫ್ ತನ್ನ ನಿರಂತರ ಪರಿಶ್ರಮದ ಮೂಲಕ ಮುಹಮ್ಮದ್ ರಾಫಿ ಇವರ ಮೇಲಿರುವ ಕೇಸನ್ನು ಹಿಂಪಡೆಯಲು ಹಲವು ಪೋಲಿಸ್ ಠಾಣೆಗಳಿಗೆ ಭೇಟಿಕೊಟ್ಟು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಇದರ ಫಲವಾಗಿ ರಾಫಿಯವರ ಪ್ರಯೋಜಕನನ್ನು ಪೊಲೀಸರು ಠಾಣೆಗೆ ಕರೆಸುವಂತಾಯಿತು.
ಕೊನೆಗೆ ಉನ್ನತ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಮುಹಮ್ಮದ್ ರಾಫಿ ಯವರ ಮೇಲೆ ಹೇರಲಾದ ಸುಳ್ಳು ದೂರನ್ನು ಹಿಂಪಡೆದು ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲ, ಇಂಡಿಯನ್ ಸೋಶಿಯಲ್ ಫೋರಂ ಕೇರಳ ಘಟಕದ ಸದಸ್ಯರಾದ ಜನಾಬ್ ಶಮೀರ್ ಅವರು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದ ಮುಹಮ್ಮದ್ ರಾಫಿ ಅವರನ್ನು ಕಳೆದ 5-6 ತಿಂಗಳ ಕಾಲ ತನ್ನ ರೂಮಲ್ಲಿ ನೆಲೆಸಲು ಅವಕಾಶ ಕಲ್ಪಿಸಿ ಅವರಿಗೆ ಬೇಕಾದ ಎಲ್ಲ ಸಹಾಯಗಳನ್ನು ಒದಗಿಸಿ ಕೊಟ್ಟರು.
ಅಲ್ಲದೆ, ವಿಮಾನಯಾನ ವೆಚ್ಚವನ್ನು ಇಂಡಿಯನ್ ಸೋಶಿಯಲ್ ಫೋರಂ ತಬೂಕ್ ಘಟಕದ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ, ಇಂಡಿಯನ್ ಸೋಶಿಯಲ್ ಫೋರಮ್ ತಬೂಕ್ ಬ್ಲಾಕ್ ಇದರ ಪ್ರ.ಕಾರ್ಯದರ್ಶಿಗಳಾದ ಜ! ಫಾರೂಕ್ ಕೆಮ್ಮಾರ ಅಲ್ಲದೆ ISF ಮಂಗಳೂರು ಉತ್ತರ ಘಟಕದ ಅಧ್ಯಕ್ಷರಾದ ಅಬ್ದುಲ್ ಲತೀಫ್, ಪ್ರ.ಕಾರ್ಯದರ್ಶಿಗಳಾದ ಅನ್ವರ್ ಅಡ್ಡೂರ್ ಮತ್ತು ಇಂಡಿಯನ್ ಸೋಶಿಯಲ್ ಪೋರಂ ಕೇರಳ ಘಟಕದ ಸದಸ್ಯರಾದ ಶಮೀರ್ ಉಪಸ್ಥಿತರಿದ್ದರು.