ಪಠ್ಯಕ್ರಮ ಪರಿಷ್ಕರಣೆಗೆ ಇಬ್ಬರು ಕನ್ನಡಿಗರುಳ್ಳ ಹೊಸ ಸಮಿತಿ ರಚನೆ

Prasthutha|

ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಪುಸ್ತಕಗಳನ್ನು ರಚಿಸುವ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೌನ್ಸಿಲ್‌ನ (ಎನ್‌ಸಿಇಆರ್‌ಟಿ) ಪಠ್ಯ ಮತ್ತು ಪಠ್ಯಕ್ರಮವನ್ನು ಪರಿಷ್ಕರಿಸಲು ಕೇಂದ್ರ ಸರಕಾರ ಮುಂದಾಗಿದೆ.

- Advertisement -

ಒಟ್ಟು 12 ಸದಸ್ಯರುಳ್ಳ ಈ ಸಮಿತಿಯಲ್ಲಿ ಕನ್ನಡಿಗರಾದ, ಇಸ್ರೋದ ಮಾಜಿ ಅಧ್ಯಕ್ಷ ಡಾ| ಕಸ್ತೂರಿ ರಂಗನ್‌ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದು, ಇವರೇ ಅಧ್ಯಕ್ಷರಾಗಿದ್ದರು. ಇವರಲ್ಲದೆ, ಮತ್ತೂಬ್ಬ ಕನ್ನಡಿಗ ಪ್ರೊ| ಟಿ.ವಿ. ಕಟ್ಟೀಮನಿ ಅವರು ಈ ಸಮಿತಿಯಲ್ಲಿದ್ದಾರೆ.

ಕಟ್ಟೀಮನಿಯವರು ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ. ಸಿಬಿಎಸ್‌ಇ ಪಠ್ಯ ಮತ್ತು ಪಠ್ಯಕ್ರಮದ ರೂಪುರೇಷೆಗಳುಳ್ಳ ರಾಷ್ಟ್ರೀಯ ಪಠ್ಯಕ್ರಮ ಫ್ರೇಂವರ್ಕ್‌ (ಎನ್‌ಸಿಎಫ್) ಎಂಬ ಕರಡು ಪ್ರತಿಯನ್ನು ಸಿದ್ಧಗೊಳಿಸಿ, ಅದನ್ನು ಈ ಸಮಿತಿ ಸರಕಾರಕ್ಕೆ ಸಲ್ಲಿಸಲಿದೆ.



Join Whatsapp