ಇಸ್ಲಾಮಾಬಾದ್: ಭದ್ರತಾ ಕಾರಣವನ್ನು ನೀಡಿ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ಸರಣಿ ರದ್ದುಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್‌ನ ಪಾಕಿಸ್ತಾನ ರಾಯಭಾರಿ ಕ್ರಿಸ್ಟಿಯನ್ ಟರ್ನರ್ ನಾವು ಯಾವುದೇ ಭದ್ರತಾ ಸಮಸ್ಯೆಗಳನ್ನು ಗಮನಕ್ಕೆ ತಂದಿರಲೇ ಇಲ್ಲ ಎಂದಿದ್ದಾರೆ. ಸದ್ಯ ಈ ಹೇಳಿಕೆಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಮುಜುಗರಕ್ಕೀಡು ಮಾಡಿದೆ.
ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಪಾಕ್ ಪ್ರವಾಸವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ರದ್ದುಗೊಳಿಸಿರುವುದು ಸ್ವತಂತ್ರ ನಿರ್ಧಾರ ಎಂದಿರುವ ಅವರು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಸರಕಾರದ ಅಧೀನದಲ್ಲಿಲ್ಲ ಎಂದಿದ್ದಾರೆ. ಅಲ್ಲದೆ ನಾವೆಲ್ಲರೂ ಪ್ರವಾಸದ ಪರವಾಗಿಯೇ ಇದ್ದೆವು, ಭದ್ರತಾ ಸಮಸ್ಯೆಯನ್ನು ಗಮನಕ್ಕೆ ತಂದಿರಲೇ ಇಲ್ಲ ಎಂದು ಹೇಳಿದ್ದಾರೆ.
ನಾನೂ ಕೂಡ ಕ್ರಿಕೆಟ್ ಅಭಿಮಾನಿ, ಪಾಕಿಸ್ಥಾನದ ಅಭಿಮಾನಿಗಳ ನೋವು ನನಗೆ ಅರಿವಾಗಿದೆ, ಮುಂದಿನ ಟಿ20 ಸರಣಿಯನ್ನು ಆಡಲು ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.