ನವದೆಹಲಿ: ಭಾರತೀಯ ವಾಯುಸೇನೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ಇವರ ನಿವೃತ್ತಿ ಬಳಿಕ ಭಾರತೀಯ ವಾಯುಸೇನೆಯ ಮುಖ್ಯಸ್ಥರಾಗಿ ವಿ.ಆರ್ ಚೌಧರಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಏರ್ ಮಾರ್ಷಲ್ ಚೌಧರಿ ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಹಿಂದೆ ಏರ್ ಮಾರ್ಷಲ್ ಚೌಧರಿ ಅವರು 1982ರ ಡಿಸೆಂಬರ್ 29ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್ಗೆಸ ನಿಯೋಜನೆಗೊಂಡಿದ್ದರು. ಅದಲ್ಲದೆ ಆಪರೇಷನ್ ಮೇಘದೂತ್, ಸಫೇದ್ ಸಾಗರ್ ಸೇರಿ ಹಲವು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಚೌಧರಿಯ 2021ರ ಜುಲೈ 1ರಂದು ಏರ್ ಮಾರ್ಷಲ್ ಎಚ್ ಎಸ್ ಅರೋರಾ ನಿವೃತ್ತಿಯ ಬಳಿಕ ವಾಯಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೌಧರಿಯ ಈಗಾಗಲೇ ಫೈಟರ್ ಮತ್ತು ಟ್ರೈನರ್ ವಿಮಾನಗಳಲ್ಲಿ 3,800 ಗಂಟೆಗೂ ಹೆಚ್ಚು ಹಾರಾಟ ಮಾಡಿದ ಅನುಭವವನ್ನು ಹೊಂದಿದ್ದಾರೆ.