ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ – ಎನ್ ಇಪಿ ಬಗ್ಗೆ ಚರ್ಚೆ ನಡೆಸದೆ ಅದನ್ನು ಜಾರಿ ಮಾಡಿರುವುದು ಸರಿಯಲ್ಲ. ತರಾತುರಿಯಲ್ಲಿ ಎನ್ ಇಪಿ ಜಾರಿಯ ಹಿಂದೆ ಸಂಘಪರಿವಾರದವರ ಕುತಂತ್ರ ಅಡಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಚಿವ ಸಂಪುಟ ಹಾಗೂ ಸಂಸತ್ ನಲ್ಲಿ ಚರ್ಚಿಸಿದ ಬಳಿಕ ರಾಜ್ಯಗಳಿಗೆ ಕಳುಹಿಸಬೇಕಿತ್ತು. ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ನೀತಿಯನ್ನು ಜಾರಿಗೆ ತರಬೇಕಿತ್ತು. ಹೀಗೆ ಏಕಾಏಕಿಯಾಗಿ ಜಾರಿಗೊಳಿಸಿರುವುದರ ಹಿಂದೆ ಸಂಘ ಪರಿವಾರದ ಕುತಂತ್ರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ವೇಳೆಯಲ್ಲಿ ಕಾರ್ಮಿಕರಿಗೆ ನೀಡಬೇಕಿದ್ದ ಫುಡ್ ಕಿಟ್ ಗಳಲ್ಲಿಯೂ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದ ಹರಿಪ್ರಸಾದ್, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯವರು ಗೂಂಡಾಗಿರಿ ಮಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಎನ್ ಇಪಿ ತರಾತುರಿಯಲ್ಲಿ ಜಾರಿಯ ಹಿಂದೆ ಸಂಘಪರಿವಾರದವರ ಕುತಂತ್ರ: ಬಿ.ಕೆ.ಹರಿಪ್ರಸಾದ್
Prasthutha|