ಬ್ಯಾರಿ ಅಕಾಡೆಮಿಯಿಂದ ಭಾಷಣ ಸ್ಪರ್ಧೆ: ಬ್ಯಾರಿಯಲ್ಲಿ ಭಾಷಣ ಮಾಡಿ, ಬಹುಮಾನ ಗೆಲ್ಲಿ

Prasthutha|

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕ್ಟೋಬರ್ 3ರ ಆದಿತ್ಯವಾರದಂದು ನಡೆಯುವ ‘ಬ್ಯಾರಿ ಭಾಷಾ ದಿನಾಚರಣೆ’ ಅಂಗವಾಗಿ ಬ್ಯಾರಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

- Advertisement -


ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 3,000, ದ್ವಿತೀಯ 2,000, ತೃತೀಯ 1,000 ರೂಪಾಯಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸೆಪ್ಟೆಂಬರ್ 23 ರೊಳಗಾಗಿ ಹೆಸರನ್ನು ಬ್ಯಾರಿ ಅಕಾಡೆಮಿಯ ಮೊಬೈಲ್ ಸಂಖ್ಯೆ: 7483946578 ಗೆ ಕರೆ ಮಾಡಿ/ವಾಟ್ಸಾಪ್ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳಿ. ಸ್ಪರ್ಧೆ ನಡೆಯುವ ಸ್ಥಳವನ್ನು ತಿಳಿಸಲಾಗುವುದು.


18 ವರ್ಷ ಮೇಲ್ಪಟ್ಟ ಎಲ್ಲಾ ಎಲ್ಲಾ ಭಾಷೆ ಮತ್ತು ಧರ್ಮದವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಷಣದ ವಿಷಯ ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟದ್ದಾಗಿರಬೇಕು ಮತ್ತು ಬ್ಯಾರಿ ಭಾಷೆಯಲ್ಲಿಯೇ ಇರಬೇಕು (ಕಂಠಪಾಠವಾಗಿರಬೇಕು), ಭಾಷಣದ ಅವಧಿಯು ಮೂರು ನಿಮಿಷಕ್ಕೆ ಸೀಮಿತವಾಗಿರಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp