ತಿರುವನಂತಪುರಂ: ಕೇರಳ ರಾಜ್ಯ ಸರ್ಕಾರದ ಓಣಂ ಲಾಟರಿಯಲ್ಲಿ ಆಟೋ ಚಾಲಕನಿಗೆ 12 ಕೋಟಿ ಲಾಟರಿ ಬಹುಮಾನ ಲಭಿಸಿದ್ದು, ರಾತ್ರೋರಾತ್ರಿ ಕೋಟ್ಯಾಧೀಶನಾಗಿದ್ದಾನೆ.
ಕೊಚ್ಚಿ ಮೂಲದ ವ್ಯಕ್ತಿಗೆ 12 ಕೋಟಿ ರೂ. ಲಾಟರಿ ಬಹುಮಾನ ದೊರೆತಿದೆ. ಇದರಲ್ಲಿ ತೆರಿಗೆಯೆಲ್ಲ ಕಳೆದು 7.39 ಕೋಟಿ ರೂ. ಹಣ ಆಟೋ ಚಾಲಕನ ಕೈಸೇರಲಿದೆ.
ಕೇರಳದಲ್ಲಿ ಮದ್ಯ ಮತ್ತು ಲಾಟರಿ ಮಾರಾಟದಿಂದ ಸಾಕಷ್ಟು ತೆರಿಗೆ ಹಣ ರಾಜ್ಯ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಲಾಟರಿ ಮಾರಾಟದಿಂದ 127 ಕೋಟಿ ರೂ. ತೆರಿಗೆ ಲಾಟರಿ ಇಲಾಖೆಗೆ ಹರಿದುಬರುತ್ತಿದೆ.