ಬಿಹಾರ: ಕಳೆದ ಕೆಲವು ದಿನಗಳಲ್ಲಿ ಯಾರ್ಯಾರದ್ದೋ ಬ್ಯಾಂಕ್ ಅಕೌಂಟ್ ಗಳಿಗೆ ಏಕಾಏಕಿ ಹಣ ಜಮೆ ಆಗುತ್ತಿದೆ.ಇಂದು ಮತ್ತೆ ಬಿಹಾರ ಬಡ ರೈತನ ಖಾತೆಗೆ 52 ಕೋಟಿ ರೂಪಾಯಿ ಜಮೆ ಆಗಿದೆ.
ಈ ಬಾರಿ ಹೀಗೆ ಅನುಭವ ಆಗಿದ್ದು ಬಡ ರೈತ ರಾಮ್ ಬಹದ್ದೂರ್ ಶಾ ಎಂಬುವರಿಗೆ ಇವರು ತಮ್ಮ ಪಿಂಚಣಿಯ ಬಗ್ಗೆ ವಿಚಾರಿಸಲು ಸಮೀಪದ ಗ್ರಾಹಕರ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹೋಗಿ ಆಧಾರ್ ಕಾರ್ಡ್ ನೀಡಿ, ತಮ್ಮ ಹೆಬ್ಬೆರಳನ್ನು ಪಂಚ್ ಮಾಡಿ ದೃಢೀಕರಣ ಮಾಡಿದ ಬಳಿಕ ಅಕೌಂಟ್ ನಲ್ಲಿರುವ ಹಣದ ಮೊತ್ತ ಹೇಳಲಾಯಿತು. ಆ ಮೊತ್ತವನ್ನು ನೋಡಿ ಸಿಎಸ್ ಪಿ ಅಧಿಕಾರಿ ಮತ್ತು ರಾಮ್ ಬಹದ್ದೂರ್ ಶಾ ಇಬ್ಬರಿಗೂ ಶಾಕ್ ಆಗಿದೆ. ಈ ಹಣ ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ ಎಂದು ರಾಮ್ ಬಹದ್ದೂರ್ ಶಾ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಖಗಾರಿಯಾ ಎಂಬಲ್ಲಿ ರಂಜಿತ್ ಎಂಬುವರ ಅಕೌಂಟ್ ಗೆ 5.5 ಲಕ್ಷ ರೂಪಾಯಿ ಬಂದಿತ್ತು. ನಿನ್ನೆ ಇಬ್ಬರು ಶಾಲೆಗೆ ಹೋಗುವ ಬಾಲಕರ ಖಾತೆಗೆ ಕೋಟ್ಯಂತರ ರೂಪಾಯಿ ಜಮಾ ಆಗಿತ್ತು. ಕತಿಹಾರ ಜಿಲ್ಲೆಯ ಪಾಸ್ಟಿಯಾ ಗ್ರಾಮದ ಬಾಲಕ ಅಸಿತ್ ಕುಮಾರ್ ಖಾತೆಗೆ 900 ಕೋಟಿ ರೂಪಾಯಿ ಬಂದಿದ್ದರೆ, ಗುರುಚಂದ್ರ ವಿಶ್ವಾಸ್ ಎಂಬುವನ ಖಾತೆಗೆ 60 ಕೋಟಿ ರೂ.ವರ್ಗಾವಣೆಯಾಗಿತ್ತು.