ವಿದೇಶಿಯರಿಗೆ ಸ್ವಂತ ನಿವೇಶನ ಖರೀದಿಗೆ ಅವಕಾಶ ನೀಡಿದ ಒಮಾನ್

Prasthutha|

ಮಸ್ಕತ್: ವಿದೇಶಿ ನಾಗರಿಕರು ಇನ್ನು ಮುಂದೆ ಒಮಾನ್ ನಲ್ಲಿ ಸೂಕ್ತ ನಿಬಂಧನೆಗಳೊಂದಿಗೆ ಸ್ವಂತ ನಿವೇಶನ ಖರೀದಿ ಮಾಡಬಹುದು ಎಂದು ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ ತಿಳಿಸಿದೆ.

- Advertisement -

23 ವಯಸ್ಸಿಗಿಂತ ಮೇಲ್ಪಟ್ಟ, ಒಮಾನ್ ನಲ್ಲಿ ಕನಿಷ್ಠ 2 ವರ್ಷಗಳಿಂದ ವಾಸವಿರುವ ಅನಿವಾಸಿಯರು ಇನ್ನು ಮುಂದೆ ವಾಣಿಜ್ಯ ಸಂಕೀರ್ಣ ಮತ್ತು ಬಹುಮಹಡಿಯ ಕಟ್ಟಡದಲ್ಲಿ 99 ವರ್ಷಗಳ ಗುತ್ತಿಗೆ ಆಧಾರದಲ್ಲಿ ನಿವೇಶನವನ್ನು ಖರೀದಿಸಬಹುದು ಎಂದು ಸಚಿವಾಲಯ ತಿಳಿಸಿದೆ.

ಪ್ರಸಕ್ತ ಹಿಂದಿನ ನಿಯಮಾವಳಿಗಳನ್ನು ಸಡಿಲಿಸಲಾಗಿದ್ದು, ವಿದೇಶಿಯರು ಖರೀದಿಸಿದ ನಿವೇಶನವನ್ನು ನಾಲ್ಕು ವರ್ಷಗಳ ಒಳಗೆ ಮಾರಾಟ ಮಾಡಲು ಅವಕಾಶವಿಲ್ಲ. ಮಾತ್ರವಲ್ಲ ಒಬ್ಬರಿಗೆ ಒಂದು ನಿವೇಶನ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ ಮತ್ತು ನಿವೇಶನ ಖರೀದಿಸುವವರು ಆರ್ಥಿಕವಾಗಿ ದುರ್ಬಲರು ರಕ್ತ ಸಂಬಂಧಿಗಳೊಂದಿಗೆ ಸೇರಿಕೊಂಡು ಪಾಲುದಾರಿಕೆಯಲ್ಲಿ ನಿವೇಶನ ಖರೀದಿಸಬಹುದು.

- Advertisement -

ಈ ಕಟ್ಟಡಗಳು ಕನಿಷ್ಠ ವರ್ಷ ಹಳೆಯದ್ದಾಗಿರಬೇಕು. ಕನಿಷ್ಠ 4 ಅಂತಸ್ತಿನ ಕಟ್ಟಡದಲ್ಲಿ ಎರಡು ಬೆಡ್ ರೂಮ್, ಸಂಪೂರ್ಣ ಸೌಕರ್ಯ ಹೊಂದಿರುವುದರ ಜೊತೆಗೆ ಶೇಕಡಾ 40 ರಷ್ಟು ಭಾಗವನ್ನು ವಿದೇಶಿಯರಿಗೆ ಮಾರಾಟ ಮಾಡಬಹುದು. ಮಾತ್ರವಲ್ಲ ಆ ಕಟ್ಟಡದಲ್ಲಿ ಶೇಕಡಾ 20 ರಷ್ಟು ಒಂದೇ ರಾಷ್ಟ್ರದವರಿಗೆ ಮಾರಾಟ ಮಾಡಬಹುದು ಎಂದು ವಸತಿ ಮತ್ತು ನಗರಾಭಿವೃದ್ದಿ ಡಾ. ಖಲ್ಫಾನ್ ಅಲ್ ಶುಐಲಿ ತಿಳಿಸಿದ್ದಾರೆ.



Join Whatsapp