100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಬರದಾರ್

Prasthutha|

ನ್ಯೂಯಾರ್ಕ್: ತಾಲಿಬಾನ್ ಸಹ ಸಂಸ್ಥಾಪಕ ಮತ್ತು ನೂತನ ಅಫ್ಘಾನ್ ಸರ್ಕಾರದ ಉಪ ಪ್ರಧಾನ ಮಂತ್ರಿ ಮುಲ್ಲಾ ಬರದಾರ್ ಅವರು ಟೈಮ್ಸ್ ನಿಯತಕಾಲಿಕ ಬಿಡುಗಡೆಗೊಳಿಸಿದ 2021 ರ ಸಾಲಿನ, 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ಸ್ ನಡೆಸಿದ ಅಧ್ಯಯನದಲ್ಲಿ ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಬರದಾರ್ ಅವರನ್ನು “ ಶಾಂತ ಸ್ವಭಾವದ, ಸಾರ್ವಜನಿಕವಾಗಿ ಹೇಳಿಕೆ ಅಥವಾ ಸಂದರ್ಶನ ನೀಡುವ ಅಪರೂಪದ ವ್ಯಕ್ತಿಯೆಂದು ಬಣ್ಣಿಸಿದೆ”

- Advertisement -

ಪ್ರಸಕ್ತ ಟೈಮ್ಸ್ ನಿಯತಕಾಲಿಕದ ಪಟ್ಟಿಯಲ್ಲಿ ಭಾರತದ ಗಣ್ಯರಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಾಲಾ, ಪ್ರಧಾನಿ ಮೋದಿ ಕೂಡ ಸೇರಿದ್ದಾರೆ.

ಮಾತ್ರವಲ್ಲ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಡ್ಯೂಕ್ ಮತ್ತು ಡಚೆಸ್ ಆಫ್ ಸಸೆಕ್ಸ್ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ನಾಯಕರ ಪಟ್ಟಿಯಲ್ಲಿ ಒಳಗೊಂಡ ಪ್ರಮುಖರಾಗಿದ್ದಾರೆ



Join Whatsapp